HomeKarnatakaಎಸ್.ಜಾನಕಿ ಅವರ ಹೆಸರು ಅಜರಾಮರವಾಗಿರುವಂತೆ ಮಾಡುತ್ತೇವೆ: ಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಎಸ್.ಜಾನಕಿ ಅವರ ಹೆಸರು ಅಜರಾಮರವಾಗಿರುವಂತೆ ಮಾಡುತ್ತೇವೆ: ಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಬೆಂಗಳೂರು: ಎಲ್ಲರ ನೆಚ್ಚಿನ ಗಾಯಕಿ ಎಸ್.ಜಾನಕಿ ಅಗಲಿರುವುದು ಬಹಳ ದು:ಖ ತಂದಿದೆ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಏಕೈಕ ಗಾಯಕಿ ಇಂದು ಇತಿಹಾಸದ ಪುಟ ಸೇರಿದ್ದಾರೆ. 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದವರು, 33 ಬಾರಿ ವಿವಿಧ ರಾಜ್ಯಗಳಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದವರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಮೇರು ಗಾಯಕಿ ಎಸ್. ಜನಕಿ ಅವರ ಹೆಸರನ್ನು ಅಜರಾಮರವಾಗುವಂತೆ ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಜಾನಕಿ ಅವರು ಬಹಳ ಸರಳ ಜೀವಿ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಅವರ ಹೆಸರು ಅಜರಾಅಮರವಾಗಿರುವಂತೆ ಮಾಡುತ್ತೇವೆ. ಈ ಬಗ್ಗೆ ಚಿತ್ರರಂಗದವರ ಜೊತೆ ಮಾತನಾಡುತ್ತೇನೆ ಎಂದರು.

ಎರಡು ವರ್ಷಗಳ ಹಿಂದೆ ಅವರು ಹೈದರಾಬಾದ್ ನಿಂದ ಮೈಸೂರಿಗೆ ಬಂದು ನೆಲೆಸಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಇಲ್ಲೆ ಇದ್ದರು. ನಿನ್ನೆ ಅವರ ಕುಟುಂಬದವರ ಜೊತೆ ಮಾತನಾಡುವಾಗ ನನಗೆ ಅಚ್ಚರಿಯಾಯಿತು. ಹೈದರಾಬಾದ್, ಚೆನ್ನೈ ಎಲ್ಲಿಗೆ ವ್ಯವಸ್ಥೆ ಮಾಡಬೇಕು ಮಾಡಿಕೊಡುತ್ತೇನೆ ಎಂದು ಹೇಳಿದೆ. ಆದರೆ ಅವರ ಕುಟುಂಬದವರು ಹೇಳಿದ್ದಿಷ್ಟೇ, ಜಾನಕಿ ಅವರಿಗೆ ಮೈಸೂರಿನಲ್ಲಿಯೇ ಇರುವ ಆಸೆಯಿತ್ತು. ಹಾಗಾಗಿ ಅವರು ಮೈಸೂರಿಗೆ ಬಂದು ವಾಸವಾಗಿದ್ದರು. ನನ್ನ ಕೊನೇ ದಿನಗಳನ್ನು ಮೈಸೂರಿನಲ್ಲಿಯೇ ಕಳೆಯುತ್ತೇನೆ ಎಂದಿದ್ದರು. ಅದರಂತೆ ಮೈಸೂರಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಹಾಗಾಗಿ ಮೈಸೂರಿನಲ್ಲಿಯೇ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವಂತೆ ಕೋರಿದರು. ಹಾಗಾಗಿ ಅವರ ಆಸೆಯಂತೆ ಮೈಸೂರಿನಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇಸಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular