HomeKarnatakaGOOD NEWS: ಬೆಂಗಳೂರು ನಾಗರಿಕರಿಗೆ ಗುಡ್ ನ್ಯೂಸ್: ನೀರಿನ ಬಿಲ್ ಬಾಕಿ ಇರುವ ಗ್ರಾಹಕರ ಬಡ್ಡಿ...

GOOD NEWS: ಬೆಂಗಳೂರು ನಾಗರಿಕರಿಗೆ ಗುಡ್ ನ್ಯೂಸ್: ನೀರಿನ ಬಿಲ್ ಬಾಕಿ ಇರುವ ಗ್ರಾಹಕರ ಬಡ್ಡಿ ಮನ್ನಾ

ಬೆಂಗಳೂರು: ಬೆಂಗಳೂರು ನಾಗರಿಕರಿಗೆ ಜಲಮಂಡಳಿ ಗುಡ್ ನ್ಯೂಸ್ ನೀಡಿದೆ. ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರ ಬಡ್ಡಿ ಮನ್ನಾ ಜಾರಿಗೆ ತಂದಿದೆ.

ಏಪ್ರಿಲ್‌ನಿಂದ ಮೂರು ತಿಂಗಳ ಅವಧಿಗೆ ಶೇ100ರಷ್ಟು ಬಡ್ಡಿ ಮನ್ನಾ ಯೋಜನೆ ಜಾರಿಗೆ ತರಲಾಗಿದೆ. ಗೃಹ, ವಾಣಿಜ್ಯ, ಕೈಗಾರಿಕಾ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರು ತಮ್ಮ ಬಾಕಿ ಬಿಲ್ ಪಾವತಿಸಿ, ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾಗರಿಕರಿಗೆ ಜಲಮಂಡಳಿಯಿಂದ ಸಿಹಿಸುದ್ದಿ ಲಭಿಸಿದ್ದು, ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ ನೀರಿನ ಬಿಲ್ ಪಾವತಿಸಿದರೆ ಶೇ100ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.

ಗೃಹ, ವಾಣಿಜ್ಯ ಹಾಗೂ ಕೈಗಾರಿಕಾ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ. ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯ ಎಲ್ಲಾ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು.ಈ ವಿಶೇಷ ಅವಕಾಶವನ್ನು ಮುಂದಿನ ಮೂರು ತಿಂಗಳಲ್ಲಿ ಬಳಸಿಕೊಳ್ಳುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular