HomeKarnatakaದರ್ಶನ್, ಮೂಡಾ ವಿಚಾರ ಬಿಡಿ; ಮೊದಲು ಮಹದಾಯಿ ವಿಚಾರದ ಬಗ್ಗೆ ಮಾತನಾಡಿ; ಪ್ರಹ್ಲಾದ್ ಜೋಶಿಗೆ ತಿರುಗೇಟು...

ದರ್ಶನ್, ಮೂಡಾ ವಿಚಾರ ಬಿಡಿ; ಮೊದಲು ಮಹದಾಯಿ ವಿಚಾರದ ಬಗ್ಗೆ ಮಾತನಾಡಿ; ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿದ ಡಿಸಿಎಂ

ಬೆಂಗಳೂರು: ‘ಮುಡಾ ಹಗರಣ ಚರ್ಚೆಯಾಗಬಾರದು ಎಂದು ರಾಜ್ಯ ಸರ್ಕಾರದಿಂದ ದರ್ಶನ್ ಫೋಟೋ ಬಿಡುಗಡೆ’ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ದರ್ಶನ್, ಮೂಡಾ ವಿಚಾರ ಇದೆಲ್ಲ ಬಿಡಿ. ಮೊದಲು ಮಹದಾಯಿ ವಿಚಾರದಲ್ಲಿ ಏನಾಗಿದೆ ಎಂಬುದನ್ನು ಮಾತನಾಡಲಿ. ಮಹದಾಯಿ ಯೋಜನೆಗೆ ಮೊದಲು ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದು ಹೇಳಿದರು.

ಕೇಂದ್ರ ಸಚಿವ ಜೋಶಿಯವರಿಗೆ ಇಲ್ಲಿಂದಲೇ ಮನವಿ ಮಾಡುತ್ತಿದ್ದೇನೆ. ಮೊದಲು ಮಹದಾಯಿ ವಿಚಾರದ ಬಗ್ಗೆ ಗಮನ ಹರಿಸಿ. ಭದ್ರಾ ಮೇಲ್ದಂಡೆ ದುಡ್ಡು ಕೊಡಿಸಿ. 5,300 ಕೋಟಿ ರೂಪಾಯಿ ಬರಬೇಕಾದದ್ದನ್ನು ಕೊಡಿಸಿ. ಅದನ್ನು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಈಗ ಚರ್ಚೆ ಬೇಡ ಮುಂದೆ ಮಾತನಾಡೋಣ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular