HomeKarnatakaBIG NEWS: ನಾನು ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವನಾಗ್ತೀನಿ ಎಂದ HDK: ಕೌಂಟರ್ ಕೊಟ್ಟ ಡಿಸಿಎಂ...

BIG NEWS: ನಾನು ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವನಾಗ್ತೀನಿ ಎಂದ HDK: ಕೌಂಟರ್ ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾನು ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವನಾಗುವುದಾಗಿ ಹೇಳಿದ್ದಾರೆ. ಹೆಚ್.ಡಿ.ಕೆ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಅವರು ಕೃಷಿ ಸಚಿವನಾದರೂ ಆಗಲಿ, ವಿತ್ತ ಸಚಿವನಾದರೂ ಆಗಲಿ. ಮೊದಲು ಎನ್ ಡಿಎ ಈ ಚುನಾವಣೆಯಲ್ಲಿ ಗೆಲ್ಲುವುದೇ ಇಲ್ಲ, ಅವರು ಕನಸು ಕಾಣಲಿ. ಆಸೆ ಯಾರು ಬೇಕಾದರೂ ಪಡಬಹುದು ಎಂದು ಟಾಂಗ್ ನೀಡಿದ್ದಾರೆ.

ಇದೆ ವೇಳೆ ಗನ್ ಹಿಡಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯನವರಿಗೆ ಹಾರ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸೆಕ್ಯೂರಿಟಿ ವೈಫಲ್ಯವೂ ಇಲ್ಲ, ಏನೂ ಇಲ್ಲ, ಅವರವರ ಭದ್ರತೆಗಾಗಿ ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆಗೂ ಗನ್ ಮ್ಯಾನ್ ಗಳಿದ್ದಾರೆ. ವಿಪಕ್ಷಗಳು ಸುಮ್ಮನೇ ಪಬ್ಲಿಸಿಟಿಗಾಗಿ ಮಾತನಾಡುತ್ತಿದ್ದಾರೆ. ಏನಾದರೂ ಒಳ್ಳೆಯ ವಿಷಯ ಇದ್ರೆ ಮಾತಾಡಬೇಕು. ಅನಗತ್ಯವಾಗಿ ಹೇಳಿಕೆಗಳನ್ನು ಕೊಡಬಾರದು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular