HomeKarnatakaಟ್ರಾಫಿಕ್ ಸಮಸ್ಯೆ ಪರಿಹರಿಸಲು ಬೀದಿಬದಿ ಅಂಗಡಿಗಳ ತೆರವು; ನಾವು ನಿಗದಿಪಡಿಸಿದ ಜಾಗದಲ್ಲಿ ವ್ಯಾಪಾರ ಮಾಡಲಿ ಎಂದ...

ಟ್ರಾಫಿಕ್ ಸಮಸ್ಯೆ ಪರಿಹರಿಸಲು ಬೀದಿಬದಿ ಅಂಗಡಿಗಳ ತೆರವು; ನಾವು ನಿಗದಿಪಡಿಸಿದ ಜಾಗದಲ್ಲಿ ವ್ಯಾಪಾರ ಮಾಡಲಿ ಎಂದ ಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ: ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಿಟಿ ರೌಂಡ್ಸ್ ಮಾಡಲಿದ್ದೇವೆ. ನಾನು ಬೆಂಗಳೂರು ಮಿನಿಸ್ಟರ್ ಆಗಿದ್ದಾಗ ಎಲ್ಲಾ ಶಾಸಕರನ್ನ ಕರೆಯಿಸಿ ಬೀದಿಬದಿ ವ್ಯಾಪಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವು. ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಶಾಸಕರ ಜೊತೆಗೆ ಸಭೆ ಮಾಡಿದ್ದೇವು. ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಹೀಗಾಗಿ, ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಬೇಕು ಎಂಬುದು ಎಲ್ಲರ ಅಭಿಪ್ರಾಯ ಆಗಿತ್ತು. ಅದರಂತೆ ತೆರವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಬಿದಿಬದಿ ವ್ಯಾಪಾರಿಗೆ ನಾವು ತೊಂದರೆ ಮಾಡುತ್ತಿಲ್ಲ. ಮುಖ್ಯ ರಸ್ತೆಯಲ್ಲಿ ಅಂಗಡಿಗಳನ್ನು ಇಡಲು ಅವಕಾಶ ಇಲ್ಲ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಕೃಷ್ಣಬೈರೇಗೌಡರು ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇಂದು ಪೊಲೀಸರು, ಅಧಿಕಾರಿಗಳ ಜೊತೆಗೆ ಸಭೆ ಮಾಡುತ್ತೇವೆ. ನಾವು ನಿಗದಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.

ಜಿಬಿಎ ಚುನಾವಣೆ ವಿಚಾರವಾಗಿ, ಜಿಬಿಎ ಚುನಾವಣೆ ಬಗ್ಗೆ ಜಿಬಿಎ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಹೋಗಿರುವುದಕ್ಕೆ ಕೋರ್ಟ್ ಅವಕಾಶ  ಕೊಡಲ್ಲ ಅಂತಾ ಹೇಳಿದೆ. ಲಾಸ್ಟ್ ಆಗಸ್ಟ್ ಅಂತಾ ಹೇಳಿದೆ. ಅಧಿಕಾರಿಗಳ ಸಮಸ್ಯೆ ಇದೆ, ಹೀಗಾಗಿ ಅವರನ್ನು ಬಿಟ್ಟು ಬಿಟ್ಟಿದೀನಿ. ಅದರಲ್ಲಿ ನಾವು ಎಂಟ್ರಿಯಾಗಲ್ಲ. ಜಿಬಿಎ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ‌ ಎಂದು ಡಿ.ಕೆ.ಶಿವಕುಮಾರ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಪುಟ ವಿಸ್ತರಣೆ ವಿಚಾರವಾಗಿ, ಯಾವುದೇ ಒತ್ತಡ ಏನಿಲ್ಲಾ, ನಮ್ಮ ನಾಯಕರು ಇವತ್ತು ಇಲ್ಲಾ ನಾಳೆ ಬರುತ್ತಾರೆ. ಬಂದ ಮೇಲೆ ಯಾವತ್ತು ಅವರು ಕರೆಯುತ್ತಾರೆ ಆಗ ನಾನು ಹೋಗುತ್ತೇನೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular