HomeLatest Newsಫ್ರಿಡ್ಜು, ಚಿನ್ನ, ವಾಚ್, ಕುರಿ-ಕೋಳಿ ಬಗ್ಗೆ ಕೇಳಬೇಡಿ: ಬೆಂಗಳೂರಿಗರಿಗೆ ವೈಯಕ್ತಿಕ ಪ್ರಶ್ನೆ ಕೇಳಬೇಡಿ: ಸಮೀಕ್ಷೆ ಸಿಬ್ಬಂದಿಗಳಿಗೆ...

ಫ್ರಿಡ್ಜು, ಚಿನ್ನ, ವಾಚ್, ಕುರಿ-ಕೋಳಿ ಬಗ್ಗೆ ಕೇಳಬೇಡಿ: ಬೆಂಗಳೂರಿಗರಿಗೆ ವೈಯಕ್ತಿಕ ಪ್ರಶ್ನೆ ಕೇಳಬೇಡಿ: ಸಮೀಕ್ಷೆ ಸಿಬ್ಬಂದಿಗಳಿಗೆ ಡಿಸಿಎಂ ಸೂಚನೆ

ಬೆಂಗಳೂರು: ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ-ಜಾತಿ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳ ಅನಗತ್ಯ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕಷ್ಟೇ ಉತ್ತರ ಕೊಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಮೀಕ್ಷೆ ಸಿಬ್ಬಂದಿಗಳು ಬೆಂಗಳೂರಿಗರಿಗೆ ವೈಯಕ್ತಿಕವಾಗಿ ಪ್ರಶ್ನೆ ಕೇಳಬೇಡಿ. ಕುರಿ, ಕೋಳಿ, ದನ, ಕರು ಎಷ್ಟಿದೆ? ಎಷ್ಟು ವಾಚ್, ಎಷ್ಟು ಚಿನ್ನ, ಎಷ್ಟು ಫ್ರಿಡ್ಜ್ ಇದೆ? ಎಂದು ಕೇಳಬೇಡಿ. ಇದೆಲ್ಲ ಅವರ ಪರ್ಸನಲ್ ವಿಚಾರ ಅದೆನ್ನೆಲ್ಲ ಬಿಟ್ಟುಬಿಡಿ ಎಂದು ಸೂಚಿಸಿದರು.

ಇನ್ನು ಜನರು ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಮಾತ್ರ ಉತ್ತರ ಕೊಡಿ. ಉತ್ತರ ಕೊಡಬಾರದು ಎನಿಸುದರೆ ಕೊಡಬಾರದು. ಆದರೆ ಯಾರೂ ಸಮೀಕ್ಷೆಯಲ್ಲಿ ಭಾಗವಹಿಸದೇ ಇರಬೇಡಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಲು. ಕೋರ್ಟ್ ಹೇಳಿದೆ ಏನು ಬೇಕೋ ಅದಕ್ಕೆ ಮಾತ್ರ ಉತ್ತರ ಕೊಡಿ. ಸಮೀಕ್ಷೆ ವೀರೋಧ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular