HomeKarnatakaBIG NEWS: ಯುದ್ಧ ಕೊನೆಗೊಂಡ ಬಳಿಕ ಸಿಲಿಂಡರ್ ದರ ಇಳಿಕೆಯಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ...

BIG NEWS: ಯುದ್ಧ ಕೊನೆಗೊಂಡ ಬಳಿಕ ಸಿಲಿಂಡರ್ ದರ ಇಳಿಕೆಯಾಗಲಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ

ದಾವಣಗೆರೆ: ಇರಾನ್, ಇಸ್ರೇಲ್-ಅಮೆರಿಕಾ ಯುದ್ದಗಳಿಂದಾಗಿ ಪ್ರಪಂಚದಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿಗಳಿಗೆ ಅನುಗುಣವಾಗಿ ತೈಲ ಕಂಪನಿಗಳು ಎಲ್‌ಪಿಜಿ ಬೆಲೆ ಏರಿಕೆ ಮಾಡಿವೆ. ಆದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧಗಳು ಕೊನೆಗೊಂಡ ನಂತರ ಬೆಲೆಗಳು ಮತ್ತೆ ಇಳಿಕೆಯಾಗಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಅಗತ್ಯವಿರುವ ಸುಮಾರು ಶೇಕಡಾ 50ರಷ್ಟು ಇಂಧನವು ವಿದೇಶಗಳಿಂದ ಆಮದಾಗುತ್ತದೆ. ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಪೂರೈಕೆಯಾಗುತ್ತಿದ್ದು ಅಲ್ಲಿ ಉಂಟಾಗಿರುವ ತೊಂದರೆಗಳಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಯುಪಿಎ ಸರ್ಕಾರದ ಅವಧಿಯ ನಿರ್ಧಾರಗಳನ್ನು ಟೀಕಿಸಿದ ಜೋಶಿ, 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಇಂಧನ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಕಂಪನಿಗಳಿಗೆ ನೀಡಿದೆ. ಈಗ ಕಂಪನಿಗಳು ಆ ಅಧಿಕಾರ ಬಳಸಿ ಬೆಲೆ ಹೆಚ್ಚಿಸುತ್ತಿವೆ ಎಂದರು. ಆದರೂ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಹೊರೆಯಾಗದಂತೆ ಗಮನಹರಿಸುತ್ತಿದೆ ಎಂದು ಸಮರ್ಥಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular