HomeKarnatakaCyber ವಂಚನೆ: ಮಾಜಿ ಸೈನಿಕರಿಗೆ ನಕಲಿ ಕರೆ/ಸಂದೇಶಗಳ ಬಗ್ಗೆ ಎಚ್ಚರಿಕೆ

Cyber ವಂಚನೆ: ಮಾಜಿ ಸೈನಿಕರಿಗೆ ನಕಲಿ ಕರೆ/ಸಂದೇಶಗಳ ಬಗ್ಗೆ ಎಚ್ಚರಿಕೆ

ಶಿವಮೊಗ್ಗ: ಉದ್ಯೋಗ, ಶೀಘ್ರ ಹಣ ಗಳಿಕೆ, ಹೆಚ್ಚು ಲಾಭ ಬಗ್ಗೆ ನಕಲಿ ಕರೆ/ಸಂದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಮಾಜಿ ಸೈನಿಕರಿಗೆ ಸೂಚನೆ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸೈನಿಕರಿಗೆ ಉದ್ಯೋಗವಕಾಶಗಳು, ಶೀಘ್ರ ಹಣಗಳಿಕೆ, ಹೆಚ್ಚು ಲಾಭಗಳ ಹೂಡಿಕೆ, ಇ-ಕೆವೈಸಿ, ಬ್ಯಾಂಕ್ ಖಾತೆಗಳ ನವೀಕರಣ, ಮೊಬೈಲ್ ಮತ್ತು ವಾಟ್ಸಪ್ ಗಳಲ್ಲಿ ಎ.ಪಿ.ಕೆ ಫೈಲ್‌ಗಳ ಸಂದೇಶ ರವಾನೆ ಹೀಗೆ ಅನೇಕ ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೇ ಮೊಬೈಲ್ ಓ.ಟಿ.ಪಿ ಅಥವಾ ಇನ್ನಿತರೆ ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿಕರಿಗೆ ವಂಚಿಸುವ ಘಟನೆಗಳು, ಡಿಜಿಟಲ್ ಅರೆಸ್ಟ್, ವಾಟ್ಸಪ್ ಕರೆಗಳ ಮೂಲಕ ಬೆದರಿಕೆ ಒಡ್ಡುವುದು ಇತ್ಯಾದಿ ಪ್ರಕರಣಗಳು ಅತೀಯಾಗಿ ಜರುಗುತ್ತಿವೆ.

ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಈ ಕುರಿತ ಯಾವುದೇ ಆಮಿಷಗಳಿಗೆ ಒಳಗಾಗಬಾರದೆಂದು ಹಾಗೂ ನಕಲಿ ಸಂದೇಶ ಮತ್ತು ಕರೆಗಳ ಕುರಿತಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಸೈಬರ್ ವಂಚನೆಗಳಿಗೊಳಗಾದಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರನ್ನು ನೋಂದಾಯಿಲು ಕೋರಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular