HomeHealthʼಅಜೀರ್ಣʼ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ʼಅಜೀರ್ಣʼ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇದ್ದಾಗ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಆಗ ಈ ಜೀರಿಗೆ ನೀರು ಮಾಡಿಕೊಂಡು ಕುಡಿದರೆ ಬೇಗನೆ ರಿಲೀಫ್ ಆಗುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮಾಡಿ ನೋಡಿ.

3 ಟೇಬಲ್ ಸ್ಪೂನ್ ಜೀರಿಗೆ ಯನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಅದು ಚಟಪಟ ಅನ್ನುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ 4 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಒಂದು ಗ್ಲಾಸ್ ಗೆ 4 ಐಸ್ ಕ್ಯೂಬ್ ಹಾಕಿಕೊಳ್ಳಿ. ನಂತರ ¼ ಲೋಟದಷ್ಟು ಮಾಡಿಟ್ಟುಕೊಂಡ ಜೀರಿಗೆ ನೀರನ್ನು ಗ್ಲಾಸ್ ಗೆ ಹಾಕಿಕೊಳ್ಳಿ. ನಂತರ 1 ಟೇಬಲ್ ಸ್ಪೂನ್ ಸಕ್ಕರೆ, ಸ್ವಲ್ಪ ಉಪ್ಪು, ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ. ನಂತರ ನೀರು ಹಾಕಿ ಒಂದು ಸ್ಪೂನಿನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಜೀರಿಗೆ ನೀರು ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular