HomeLatest NewsBREAKING: ಕಬ್ಬನ್ ಪಾರ್ಕ್ ನಲ್ಲಿ ಫ್ಲವರ್ ಶೋಗೆ ಚಾಲನೆ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ:...

BREAKING: ಕಬ್ಬನ್ ಪಾರ್ಕ್ ನಲ್ಲಿ ಫ್ಲವರ್ ಶೋಗೆ ಚಾಲನೆ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಡಿಸೆಂಬರ್ 7ರವರೆಗೆ ನಡೆಯಲಿದೆ ಪುಷ್ಪ ಮೇಳ

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಫ್ಲವರ್ ಶೋಗೆ ಸಿಎಸ್ ಶಾಲಿನಿ ರಜನೀಶ ಚಾಲನೆ ನೀಡಿದ್ದಾರೆ. 10 ವರ್ಷಗಳ ಬಳಿಕ ಕನ್ನಡ ರಾಜ್ಯೋತ್ಸವ ಹಾಗೂ ಮಕಕ್ಳ ದಿನಾಚರಣೆಯ ಅಂಗವಾಗ್ ಕಬ್ಬನ್ ಪಾರ್ಕ್ ನಲ್ಲಿ ಪುಷ್ಪ ಪ್ರದ್ರ‍್ಶನ ನಡೆಯುತ್ತಿದೆ.

ಇಂದಿನಿಂದ ಡಿಸೆಂಬರ್ 27ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಪುಷ್ಪ ಮೇಳ ನಡೆಯಲಿದೆ. ಆಕರ್ಷಕ ಕಲಾಕೃತಿಗಳು, ವಿವಿಧ ಬಗೆಯ ಹೂವುಗಳು ಕಬ್ಬನ್ ಪಾರ್ಕ್ ನಲ್ಲಿ ಮೇಳೈಸಿದ್ದು, ಜನರು ಸಂಭ್ರಮದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.

ಫ್ಲವರ್ ಶೋಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ದೊಡ್ದವರಿಗೆ 30 ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ. ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನದ ಜೊತೆಗೆ ಕಲಾ, ಸಂಸ್ಕೃತಿ ಹಬ್ಬವನ್ನೂ ಆಯೋಜಿಸಿದೆ. ಬೆಳಿಗ್ಗೆ 6ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular