HomeEntertainmentಸಿಎಸ್‌ಕೆ ಓಪನಿಂಗ್‌ನಲ್ಲಿ ಹೊಸ ಹವಾ: ರುತುರಾಜ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಸಂಜು ಸ್ಯಾಮ್ಸನ್!

ಸಿಎಸ್‌ಕೆ ಓಪನಿಂಗ್‌ನಲ್ಲಿ ಹೊಸ ಹವಾ: ರುತುರಾಜ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಸಂಜು ಸ್ಯಾಮ್ಸನ್!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಗೆ ತಯಾರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಆರಂಭಿಕ ಜೋಡಿಯ ಕುರಿತಾದ ಕುತೂಹಲಕ್ಕೆ ತೆರೆ ಎಳೆದಿದೆ. ಮುಂಬೈನಲ್ಲಿ ನಡೆದ ಕ್ಯಾಪ್ಟನ್ಸ್‌ ಡೇ ಕಾರ್ಯಕ್ರಮದಲ್ಲಿ ನಾಯಕ ರುತುರಾಜ್ ಗೈಕ್ವಾಡ್ ಮಾಹಿತಿ ನೀಡಿದ್ದು, ಈ ಬಾರಿ ತಾವು ಮತ್ತು ಹೊಸದಾಗಿ ತಂಡ ಸೇರಿರುವ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸುವುದಾಗಿ ಖಚಿತಪಡಿಸಿದ್ದಾರೆ.

ಕಳೆದ ಸೀಸನ್‌ನಲ್ಲಿ ಆರಂಭಿಕ ಜೋಡಿಯ ಸಮಸ್ಯೆಯಿಂದ ಬಳಲಿದ್ದ ಸಿಎಸ್‌ಕೆ, ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿಕೊಳ್ಳುವ ಮೂಲಕ ದೊಡ್ಡ ಬದಲಾವಣೆಗೆ ಮುಂದಾಗಿತ್ತು. ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಂಜು, ಸದ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಬಳಸಿಕೊಳ್ಳಲು ಮ್ಯಾನೇಜ್‌ಮೆಂಟ್ ಅವರನ್ನು ಆರಂಭಿಕ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಯುವ ಆಟಗಾರ ಆಯುಷ್ ಮ್ಹಾತ್ರೆ ಕಳೆದ ಬಾರಿ ಓಪನರ್ ಆಗಿ ಮಿಂಚಿದ್ದರೂ, ಈ ಬಾರಿ ಸಂಜು ಆಗಮನದಿಂದಾಗಿ ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅನುಭವಿ ಗೈಕ್ವಾಡ್ ಮತ್ತು ಅಬ್ಬರದ ಆಟಕ್ಕೆ ಹೆಸರಾದ ಸ್ಯಾಮ್ಸನ್ ಜೋಡಿಯು ಪವರ್‌ಪ್ಲೇನಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 177 ಪಂದ್ಯಗಳಿಂದ 4,704 ರನ್ ಗಳಿಸಿರುವ ಸಂಜು ಸ್ಯಾಮ್ಸನ್, ಸಿಎಸ್‌ಕೆ ಪರ ಮೊದಲ ಬಾರಿಗೆ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಮಾರ್ಚ್ 30 ರಂದು ಗುವಾಹಟಿಯಲ್ಲಿ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಈ ಹೊಸ ಜೋಡಿ ಕಣಕ್ಕಿಳಿಯಲಿದ್ದು, ಐದನೇ ಬಾರಿಯ ಚಾಂಪಿಯನ್ ತಂಡಕ್ಕೆ ಹೊಸ ಚೈತನ್ಯ ತುಂಬುವ ವಿಶ್ವಾಸದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular