HomeHealthಕೆಲವೊಮ್ಮೆ ಅಳುವುದರಿಂದಲೂ ಇದೆ ಆರೋಗ್ಯಕ್ಕೆ ಅನೇಕ ಪ್ರಯೋಜನ

ಕೆಲವೊಮ್ಮೆ ಅಳುವುದರಿಂದಲೂ ಇದೆ ಆರೋಗ್ಯಕ್ಕೆ ಅನೇಕ ಪ್ರಯೋಜನ

ಇಂದಿನ ಕಾಲದಲ್ಲಿ ಎಲ್ಲರೂ ಉತ್ತಮ ಆರೋಗ್ಯವನ್ನು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತಾರೆ.

ಉತ್ತಮ ಆರೋಗ್ಯಕ್ಕೆ ನಗು ಬಹಳ ಮುಖ್ಯ. ಆದರೆ ಅಳುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂಬುದೂ ನಿಜ. ಕೆಲವೊಮ್ಮೆ ಅಳುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅಳುವಿಕೆಯ ಪ್ರಯೋಜನಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.

ಅನೇಕ ಬಾರಿ ಅತ್ತ ನಂತರ ಮನಸ್ಸು ಹಗುರವಾಗಿರುತ್ತದೆ. ಮನಸ್ಸು ಶಾಂತವಾಗುತ್ತದೆ. ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕಣ್ಣೀರಿನ ಮೂಲಕ ಮನಸ್ಸಿನ ಹೊರೆ ಕಡಿಮೆಯಾಗುತ್ತದೆಯಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಕಾರಾತ್ಮಕ ಚಿಂತನೆ ದೂರವಾಗುತ್ತದೆ. ಮನಸ್ಸಿನ ಮೇಲೆ ಯಾವುದೇ ಒತ್ತಡ ಬಂದಾಗ ಮನಸ್ಸು ನಕಾರಾತ್ಮವಾಗಿ ಆಲೋಚನೆ ಮಾಡುತ್ತದೆ. ಈ ವೇಳೆ ಅತ್ತರೆ ನಕಾರಾತ್ಮಕ ಚಿಂತನೆ ಕಡಿಮೆಯಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಕಣ್ಣೀರಿನ ರೂಪದಲ್ಲಿ ಹೊರಗೆ ಹೋಗುತ್ತವೆ.

ಕಣ್ಣುಗಳು ಸ್ವಚ್ಛವಾಗುತ್ತವೆ. ಕಣ್ಣುಗಳಲ್ಲಿ ಧೂಳು ತುಂಬಿ ಅನೇಕ ಸಮಸ್ಯೆ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಹಾನಿಕಾರಕ ಅಂಶಗಳು ಕಣ್ಣುಗಳ ಬಳಿ ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಅಳುವಾಗ ಇವು  ಕಣ್ಣೀರಿನೊಂದಿಗೆ ಹೊರಬರುತ್ತವೆ.

ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲಾಗುತ್ತದೆ. ಅಳದೆ ಇರುವುದರಿಂದ ಕಣ್ಣುಗಳ ಪೊರೆಯ ಮೃದುತ್ವವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದು ನಮ್ಮ ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳಿಂದ ಹೊರಬರುವ ಕಣ್ಣೀರು ಈ ಮೃದುತ್ವವನ್ನು ಕಾಪಾಡಿಕೊಳ್ಳುತ್ತದೆ. ಇದು ಕಣ್ಣುಗಳನ್ನು ತೇವವಾಗಿರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular