ಟಿವಿಯಲ್ಲಿ ಮತ್ತೆ ಬರಲು ಸಿದ್ಧವಾಗಿದೆ ಜನಪ್ರಿಯ ಥ್ರಿಲ್ಲರ್ ಸರಣಿ ʼಕ್ರೈಮ್ ಪ್ಯಾಟ್ರೋಲ್ʼ

ಜನಪ್ರಿಯ ಕ್ರೈಮ್ ಥ್ರಿಲ್ಲರ್ ಸರಣಿ ಕ್ರೈಮ್ ಪ್ಯಾಟ್ರೋಲ್ ಹೊಸ ಪರಿಕಲ್ಪನೆಯೊಂದಿಗೆ ಮತ್ತೆ ಟಿವಿ ಪರದೆಯ ಮೇಲೆ ಬರಲು ಸಿದ್ಧವಾಗಿದೆ. ʼಕ್ರೈಮ್ ಪ್ಯಾಟ್ರೋಲ್ 48ʼ ಅವರ್ಸ್ ಎಂಬ ಹೆಸರಿನ ಹೊಸ ಸೀರೀಸ್ ಜುಲೈ 10 ರಂದು ರಾತ್ರಿ 10 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ನಲ್ಲಿ ಪ್ರದರ್ಶನಗೊಳ್ಳಲಿದೆ.

48 ಹವರ್ಸ್ ಎಂಬುದು ಪೊಲೀಸ್ ತನಿಖೆಯ ಪ್ರಮುಖ ಮೊದಲ 48 ಗಂಟೆಗಳ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಮಿತಿಯೊಳಗೆ ಅಪರಾಧಗಳನ್ನು ಪರಿಹರಿಸಲು ಮತ್ತು ಅಂತಹ ದುಷ್ಕೃತ್ಯಗಳ ಮೂಲ ಕಾರಣವನ್ನು ಕಂಡುಹಿಡಿಯಲು ಕಾನೂನು ಜಾರಿಯಲ್ಲಿರುವ ಒತ್ತಡವನ್ನು ಹೈಲೈಟ್ ಮಾಡುವ ಸರಣಿಯು ಇದಾಗಿದೆ. ಈ ಸೀಸನ್‌ನ ಅಡಿಬರಹ ‘ವಕ್ತ್ ಕಿ ಚುನೌತಿ’ ಯಾಗಿದ್ದು ಇದು ಸೀಮಿತ ಸರಣಿಯಾಗಿದೆ.

ಮುಂಬರುವ ಸೀಸನ್ ನ ಪ್ರೋಮೋಗಳನ್ನು ತಯಾರಕರು ಬಿಡುಗಡೆ ಮಾಡಿದ್ದು ಈ ಕ್ರೈಮ್ ಥ್ರಿಲ್ಲರ್ ಸರಣಿಯ ವೀಕ್ಷಕರು ಉತ್ಸುಕರಾಗಿದ್ದಾರೆ. ಅಪರಾಧಿಗಳು ಸಾಮಾನ್ಯ ಜನರಿಗೆ ಹಾನಿ ಮಾಡುವ ವಿಧಾನಗಳು ಮತ್ತು ದುಷ್ಕರ್ಮಿಗಳಿಗೆ ಬಲಿಯಾಗದಂತೆ ನಮ್ಮನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳುವುದು ಎಂಬುದರ ಕುರಿತು ಮುನ್ನೆಚ್ಚರಿಕೆಯೊಂದಿಗೆ ಪ್ರೋಮೋ ಹೊರಬಂದಿದೆ.

ಕ್ರೈಮ್ ಪ್ಯಾಟ್ರೋಲ್ 2003 ರಲ್ಲಿ ತನ್ನ ಮೊದಲ ಸೀಸನ್ ಆರಂಭಿಸಿತು. ನಟರಾದ ಅನುಪ್ ಸೋನಿ, ಸಾಕ್ಷಿ ತನ್ವರ್ ಮತ್ತು ದಿವ್ಯಾಂಕ ತ್ರಿಪಾಠಿ ಅವರು ಈ ಜನಪ್ರಿಯ ಸರಣಿಯ ಹಿಂದಿನ ಸಂಚಿಕೆಗಳನ್ನು ಕ್ರೈಮ್ ಪೆಟ್ರೋಲ್ ದಸ್ತಕ್ ಮತ್ತು ಕ್ರೈಮ್ ಪೆಟ್ರೋಲ್ ಸತಾರ್ಕ್ ಶೀರ್ಷಿಕೆಗಳ ಅಡಿಯಲ್ಲಿ ಹೋಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read