HomeLatest Newsಮಹಿಳಾ ತಂಡಕ್ಕೆ ಫೈನಲ್, ಪುರುಷರಿಗೆ ಸೆಮಿಫೈನಲ್: ಏಷ್ಯನ್ ಗೇಮ್ಸ್‌ನಲ್ಲಿ ಎದುರಾಗಲಿದೆಯಾ ಪಾಕ್ ಸವಾಲು?

ಮಹಿಳಾ ತಂಡಕ್ಕೆ ಫೈನಲ್, ಪುರುಷರಿಗೆ ಸೆಮಿಫೈನಲ್: ಏಷ್ಯನ್ ಗೇಮ್ಸ್‌ನಲ್ಲಿ ಎದುರಾಗಲಿದೆಯಾ ಪಾಕ್ ಸವಾಲು?

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್ ಟೂರ್ನಿಯ ಕ್ರಿಕೆಟ್ ಪಂದ್ಯಾವಳಿಗಳ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳ ಹಾದಿ ಸ್ಪಷ್ಟವಾಗಿದೆ. ಕೊರೊಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ಈ ಪಂದ್ಯಗಳು ನಡೆಯಲಿದ್ದು, ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡುವ ಸಾಧ್ಯತೆ ದಟ್ಟವಾಗಿದೆ.

ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಸೆಪ್ಟೆಂಬರ್ 18 ರಂದು ಜಪಾನ್ ವಿರುದ್ಧ ಆಡುವ ಮೂಲಕ ತನ್ನ ಪಯಣ ಆರಂಭಿಸಲಿದೆ. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಅಥವಾ ಚೀನಾ ವಿರುದ್ಧ ಭಾರತ ಸೆಣಸಲಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಶುಭಾರಂಭ ಮಾಡಿದರೆ ಫೈನಲ್‌ ಹಂತ ತಲುಪುವ ಅವಕಾಶವಿದೆ. ಹೀಗಾಗಿ ಸೆಪ್ಟೆಂಬರ್ 22 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

ಪುರುಷರ ವಿಭಾಗದಲ್ಲಿ ಭಾರತೀಯ ತಂಡಕ್ಕೆ ನೇರ ಕ್ವಾರ್ಟರ್ ಫೈನಲ್ ಪ್ರವೇಶ ಸಿಕ್ಕಿದೆ. ಸೆಪ್ಟೆಂಬರ್ 28 ರಂದು ಭಾರತ ತನ್ನ ಮೊದಲ ಪಂದ್ಯವನ್ನಾಡಲಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಜಯಗಳಿಸಿದರೆ ಅಕ್ಟೋಬರ್ 1 ರಂದು ನಡೆಯುವ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸುವ ಸಾಧ್ಯತೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಮಹಿಳಾ ತಂಡದ ವೇಳಾಪಟ್ಟಿ:

  • ಸೆಪ್ಟೆಂಬರ್ 18: ಭಾರತ vs ಜಪಾನ್ (ಮಧ್ಯಾಹ್ನ 2:00)

  • ಸೆಪ್ಟೆಂಬರ್ 20: ಸೆಮಿಫೈನಲ್ (ಮಧ್ಯಾಹ್ನ 2:00)

  • ಸೆಪ್ಟೆಂಬರ್ 22: ಫೈನಲ್ / ಕಾಂಸ್ಯ ಪದಕದ ಪಂದ್ಯ

ಭಾರತೀಯ ಪುರುಷರ ತಂಡದ ವೇಳಾಪಟ್ಟಿ:

  • ಸೆಪ್ಟೆಂಬರ್ 28: ಕ್ವಾರ್ಟರ್ ಫೈನಲ್

  • ಅಕ್ಟೋಬರ್ 1: ಸೆಮಿಫೈನಲ್

  • ಅಕ್ಟೋಬರ್ 3: ಫೈನಲ್ / ಕಾಂಸ್ಯ ಪದಕದ ಪಂದ್ಯ

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular