Viral Video: ಸ್ಟೇಜ್ ಮೇಲೆ ನಿದ್ರೆಗೆ ಜಾರಿದ ವರ; ಮೊದಲ ರಾತ್ರಿಗೆ ತಯಾರಿ ಎಂದ ನೆಟ್ಟಿಗರು…!

ಮ್ಯಾರೇಜ್‌ ವಿಡಿಯೋಗಳು ಇಂಟರ್ನೆಟ್‌ ನಲ್ಲಿ ವೈರಲ್‌ ಆಗ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆ ನೀಡೋದು ಸುಳ್ಳಲ್ಲ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮದುವೆ ವಿಡಿಯೋಗಳು ಸಾಕಷ್ಟಿವೆ. ಇನ್ನು ವೇದಿಕೆ ಮೇಲೆ ಪತಿ – ಪತ್ನಿ ಕಿತ್ತಾಡಿಕೊಂಡು ಮದುವೆ ಕ್ಯಾನ್ಸಲ್‌ ಮಾಡಿಕೊಂಡ ವಿಡಿಯೋಕ್ಕೆ ಬರವಿಲ್ಲ. ಈ ಮಧ್ಯೆ ವಧು –ವರರ ಇನ್ನೊಂದು ವಿಡಿಯೋ ಈಗ ಸುದ್ದಿ ಮಾಡಿದೆ.

ಇನ್ಸ್ಟಾಗ್ರಾಮ್‌ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೇದಿಕೆ ಮೇಲೆ ಕುಳಿತಿರುವ ವರ ಅಲ್ಲೇ ನಿದ್ರೆ ಮಾಡ್ತಿದ್ದಾನೆ. ಮಧುವಿನ ಹೆಗಲಿಗೆ ತಲೆಯಿಟ್ಟು ನಿದ್ರೆ ಮಾಡುವ ಪ್ರಯತ್ನವನ್ನು ವರ ಮಾಡ್ತಾನೆ. ಸಂಬಂಧಿಕರು ಆತನನ್ನು ಎಬ್ಬಿಸುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದ್ರೂ ಆತ ಏಳ್ತಿಲ್ಲ. ವಧು ಈ ಬಗ್ಗೆ ಹೆಚ್ಚಿನ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಒಮ್ಮೆ ಆತನ ಮುಖ ನೋಡಿ ನಂತ್ರ ತಲೆ ತಗ್ಗಿಸಿ ಕುಳಿತುಕೊಳ್ತಾಳೆ.

ಈ ವಿಡಿಯೋಗೆ ನೆಟ್ಟಿಗರ  ಪ್ರತಿಕ್ರಿಯೆ : ವೀಡಿಯೊದ ಕಾಮೆಂಟ್ ಸೆಕ್ಷನ್‌ ನಲ್ಲಿ ನಗುವ ಎಮೋಜಿಗಳು ಹರಿದಾಡ್ತಿವೆ. ಈ ವಿಡಿಯೋ ನೋಡಿದ ಜನರು, ವರ ನಿದ್ರೆ ಮಾಡಿಲ್ಲ, ಮದ್ಯದ ಗುಂಗಿನಲ್ಲಿದ್ದಾನೆ ಎನ್ನುತ್ತಿದ್ದಾರೆ. ಇನ್ನೊಬ್ಬರು ಆತ ಫಸ್ಟ್‌ ನೈಟ್‌ ಗೆ ಈಗ್ಲೇ ತಯಾರಿ ನಡೆಸಿದ್ದಾನೆಂದು ಕಮೆಂಟ್‌ ಮಾಡಿದ್ದಾರೆ. ತನ್ನ ಮದುವೆಯಲ್ಲೇ ಆಲ್ಕೋಹಾಲ್‌ ಸೇವನೆ ಮಾಡಿ ಬಂದಿದ್ದಾನೆ ದುಷ್ಟ ಎಂದು ಛೀಮಾರಿ ಹಾಕಿದವರ ಸಂಖ್ಯೆ ಕೂಡ ಹೆಚ್ಚಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read