HomeKarnatakaಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಲಕ್ಷ ಲಕ್ಷ ವಂಚನೆ

ಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಲಕ್ಷ ಲಕ್ಷ ವಂಚನೆ

ಕೊಪ್ಪಳ: ಕೋರ್ಟ್ ನಲ್ಲಿ ಕೆಲಸ ಕೊಡಿದುವುದಾಗಿ ಹೇಳಿ ನಂಬಿಸಿ ವ್ಯಕ್ತಿಯೀರ್ವ ನೂನಾರು ಜನರಿಗೆ ಲಕ್ಷ ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಸಿದ್ದಲಿಂಗಯ್ಯ ಹಿರೇಮಠ ಎಂಬುವವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ನ್ಯಾಯಾಲಯದಲ್ಲಿ ಸರ್ವರ್, ಜವಾನ, ಪ್ರೆಸೆಸ್ ಸರ್ವರ್ ಹುದ್ದೆ ಖಾಲಿ ಇದೆ ಎಂದು ಹೇಳಿ ಕೆಲಸ ಕೊಡಿಸುತ್ತೇನೆ ಎಂದು ಜನರಿಂದ 6-7 ಲಕ್ಷ ರೂಪಾಯಿ ಪಡೆದು ವಂಚಿಸುತ್ತಿದ್ದ.

ಅಲ್ಲದೇ ಕೆಲವರಿಗೆ ನಕಲಿ ನೇಮಕಾತಿ ಆದೇಶ ಪತ್ರವನ್ನೂ ನೀಡಿದ್ದಾನೆ. ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿ ಆದೇಶ ಪತ್ರ ನೀಡಿದ್ದಾರೆ ಎನ್ನಲಾಗಿದೆ. ನೇಮಕಾತಿ ಪತ್ರ ಪಡೆದು ಕೋರ್ಟ್ ಗೆ ಕೆಲಸಕ್ಕೆಂದು ಹೋದಾಗಲೇ ವಂಚನೆ ಪ್ರಕ್ಕರಣ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಮೂಲದ ಅಬ್ದುಲ್ ರಜಾಕ್ ಎಂಬುವವರು ಸಿದ್ದಲಿಂಗಯ್ಯ ವಿರುದ್ಧ ಸಿಸಿಬಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular