HomeKarnatakaಬೈಕ್ ಮಾರ್ಪಾಡು ಮಾಡಿಸಿದ್ದ ಯುವಕನಿಗೆ ಶಾಕ್: 16,500 ರೂ. ದಂಡ ವಿಧಿಸಿದ ಕೋರ್ಟ್

ಬೈಕ್ ಮಾರ್ಪಾಡು ಮಾಡಿಸಿದ್ದ ಯುವಕನಿಗೆ ಶಾಕ್: 16,500 ರೂ. ದಂಡ ವಿಧಿಸಿದ ಕೋರ್ಟ್

ಶಿವಮೊಗ್ಗ: ಬಜಾಜ್ ಕವಾಸಕಿ ಬೈಕ್ ಅನ್ನು ಯಮಹಾ ಬೈಕ್ ರೀತಿ ಕಾಣುವಂತೆ ಮಾರ್ಪಾಡು ಮಾಡಿಸಿದ್ದ ಯುವಕನಿಗೆ ಶಿವಮೊಗ್ಗದ ಮೂರನೇ ಎಸಿಜೆಎಂಎಫ್ ನ್ಯಾಯಾಲಯ 16,500 ರೂಪಾಯಿ ದಂಡ ವಿಧಿಸಿದೆ.

ಶಿವಮೊಗ್ಗದ ಆರ್‌ಎಂಎಲ್ ನಗರದ ಧನಂಜಯ(19) ತನ್ನ ಕವಾಸಕಿ ಬಜಾಜ್ ಬೈಕ್ ಅನ್ನು ಯಮಹಾ ಆರ್.ಎಕ್ಸ್. ರೀತಿ ಕಾಣುವಂತೆ ಮಾರ್ಪಾಡು ಮಾಡಿಕೊಂಡು ಅದಕ್ಕೆ ಕರ್ಕಶ ಶಬ್ದದ ಹಾರ್ನ್ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಸಾರ್ವಜನಿಕರು ಸಂಚಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಶಿವಮೊಗ್ಗ ಪೂರ್ವ ಸಂಚಾರ ಠಾಣೆ ಪೊಲೀಸರು ಬೈಕ್ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಆರಿಸಿದ ನ್ಯಾಯಾಧೀಶರು ಆರೋಪಿಗೆ ದಂಡ ವಿಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular