HomeKarnatakaBREAKING: ಕೋರ್ಟ್ ಆವರಣದಲ್ಲಿಯೇ ಅಳಿಯನಿಗೆ ಚಾಕು ಇರಿದ ಮಾವ

BREAKING: ಕೋರ್ಟ್ ಆವರಣದಲ್ಲಿಯೇ ಅಳಿಯನಿಗೆ ಚಾಕು ಇರಿದ ಮಾವ

ರಾಯಚೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕೋರ್ಟ್ ಆವರಣದಲ್ಲಿಯೇ ಮಾವನೊಬ್ಬ ಅಳಿಯನಿಗೆ ಚಾಕುವಿನಿಂದ ಇರಿದ ಘಟನೆ ರಾಅಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.

ಶಂಭುಲಿಂಗ (52) ಚಾಕು ಇರಿತಕ್ಕೊಳಗಾದ ಅಳಿಯ. ದಾನಪ್ಪ ಅಳಿಯನಿಗೆ ಚಾಕು ಇರಿದ ಮಾವ. ಪತ್ನಿ ವಿಜಯಲಕ್ಷ್ಮೀ ಹಾಗೂ ಮಾವ ದಾನಪ್ಪ ಸೇರಿ ಚಾಕು ಇರಿದಿರುವ ಆರೋಪ ಕೇಳಿಬಂದಿದೆ. ಶಂಭುಲಿಂಗ ಅವರ ಎದೆ, ಬೆನ್ನು ಸೇರಿ ಮೂರ್ನಾಲ್ಕು ಕಡೆ ಮನ ಬಂದಂತೆ ಚಾಕು ಇರಿಯಲಾಗಿದೆ.

ಶಂಭುಲಿಂಗ ಪತ್ನಿ ವಿಜಯಲಕ್ಷ್ಮೀ ಕೋರ್ಟ್ ನಲ್ಲಿ ಡಿಗ್ರೂಪ್ ಸಿಬ್ಬಂದಿ. ಇಂದು ಕೋರ್ಟ್ ಗೆ ಕೆಲಸದ ನಿಮತ್ತ ಶಂಭುಲಿಂಗ ಬಂದಿದ್ದರು. ಈ ವೇಳೆ ಶಂಭುಲಿಂಗನನ್ನು ನೋಡಿ ಮಾವ ದಾನಪ್ಪ ಕಿರಿಕ್ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ಶುರುವಾಗಿದೆ. ಪತ್ನಿ ವಿಜಯಲಕ್ಷ್ಮೀ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಮಾವ ದಾನಪ್ಪ ಅಳಿಯ ಶಂಭುಲಿಂಗ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಮನಬಂದಂತೆ ಇರಿದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಹಲ್ಲೆಗೊಳಗಾಗಿರುವ ಶಂಭುಲಿಂಗನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular