HomeKarnatakaಕೊರಿಯರ್ ಬಾಯ್ ಗೆ ಚಾಕು ಇರಿದ ದುಷ್ಕರ್ಮಿ

ಕೊರಿಯರ್ ಬಾಯ್ ಗೆ ಚಾಕು ಇರಿದ ದುಷ್ಕರ್ಮಿ

ಬೆಂಗಳೂರು: ಲೊಕೇಷನ್ ಕಳುಹಿಸಿದ ಜಾಗಕ್ಕೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ಬಾಯ್ ಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಅಶೋಕನಗರದಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕನನ್ನು ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.

ಕೊರಿಯರ್ ಮಾಡಲು ಕಳುಹಿಸಿದ ಲೊಕೇಷನ್ ಗೆ ಬರದೇ ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಕೋಪಗೊಂಡು ದುಷ್ಕರ್ಮಿ ಯುವಕನಿಗೆ ಚಾಕು ಇರಿದಿದ್ದಾನೆ. ಅಟ್ಟಾಡಿಸಿಕೊಂಡು ಚಾಕು ಇರಿದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular