HomeKarnatakaSHOCKING NEWS: ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ದಂಪತಿ

SHOCKING NEWS: ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ದಂಪತಿ

ಮಂಗಳೂರು: ದಂಪತಿ ಇಬ್ಬರೂ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದ ಉರ್ದುಗುಡ್ಡದಲ್ಲಿ ನಡೆದಿದೆ.

ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯ ಹತ್ತಿರವೇ ಇರುವ ಗುಡ್ಡದ ಮೇಲೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಪತಿ-ಪತ್ನಿ ಸಾವಿಗೆ ಶರಣಾಗಿದ್ದಾರೆ.

ದಂಪತಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನೋಣಯ್ಯ ಪೂಜಾರಿ ಮೊದಲ ಪತ್ನಿ ಸಾವಿನ ಬಳಿಕ ಎರಡನೆ ವಿವಾಹವಾಗಿದ್ದರು. ಕಳೆದ 5 ವರ್ಷಗಳಿಂದ ನೋಣಯ್ಯಗೆ ತೀವ್ರ ತಲೆನೋವು ಆರಂಭವಾಗಿತ್ತು. ಎರಡನೇ ಪತ್ನಿ ಬೇಬಿಗೆ ಮಕ್ಕಳಿಲ್ಲವಲ್ಲ ಎಂಬ ನೋವು. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular