HomeCrimeಚಪ್ಪಲಿ ಬಿಡುವ ವಿಚಾರಕ್ಕೆ ಜಗಳ; ಕೊಲೆಯಲ್ಲಿ ಅಂತ್ಯ

ಚಪ್ಪಲಿ ಬಿಡುವ ವಿಚಾರಕ್ಕೆ ಜಗಳ; ಕೊಲೆಯಲ್ಲಿ ಅಂತ್ಯ

ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರದಲ್ಲಿನ ಜಗಳದಲ್ಲಿ ದಂಪತಿಗಳು ಪಕ್ಕದ ಮನೆಯವರನ್ನ ಹತ್ಯೆ ಮಾಡಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮನೆ ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರಕ್ಕೆ ದಂಪತಿಗಳು ಹಲವು ದಿನಗಳಿಂದ ಜಗಳವಾಡಿದ ನಂತರ ನೆರೆ ಮನೆಯವರನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೀರಾ ರೋಡ್ ಪೂರ್ವದ ನಯಾ ನಗರದಿಂದ ಮಹಿಳೆಯನ್ನು ಬಂಧಿಸಲಾಗಿದೆ ಆದರೆ ಆಕೆಯ ಪತಿ ಪರಾರಿಯಾಗಿದ್ದು ಇನ್ನೂ ಪತ್ತೆಯಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಂಪತಿಗಳು ಪರಸ್ಪರರ ಬಾಗಿಲಿನ ಬಳಿ ಚಪ್ಪಲಿ ಇಡುವುದಕ್ಕಾಗಿ ತಮ್ಮ ನೆರೆಹೊರೆಯವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಈ ಜಗಳ ಶನಿವಾರ ರಾತ್ರಿ ಕೊಲೆಗೆ ಕಾರಣವಾಯಿತು ಎಂದು ನಯಾ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಿಲಾನಿ ಸೈಯದ್ ಹೇಳಿದ್ದಾರೆ.

ಅಫ್ಸರ್ ಖಾತ್ರಿ (54) ಅವರು ಹೊಡೆದಾಟದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಪತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಅವರು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular