HomeLive NewsBREAKING: ನೂರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಸಂಪೂರ್ಣ ಬೆಳೆ ಸುಟ್ಟು ಕರಕಲು:...

BREAKING: ನೂರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಸಂಪೂರ್ಣ ಬೆಳೆ ಸುಟ್ಟು ಕರಕಲು: ನೊಂದ ರೈತ ಕುಟುಂಬದಿಂದ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನ

ಗದಗ: ರೈತ ಕುಟುಂಬವೊಂದು 100 ಎಕರೆಯಲ್ಲಿ ಬೆಳೆದಿದ್ದ ಮೆಕ್ಕಜೋಳ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಮೆಕ್ಕೆಜೋಲದ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಅತ್ತಿಕಟ್ಟಿ ಗ್ರಾಮದ ರೈತ ಸಹೋದರರು ನೂರು ಎಕರೆ ಜಾಗದಲ್ಲಿ ಮೆಕ್ಕೆಜೋಳ ಬೆಳೆದು ಫಸಲು ತೆಗೆದಿದ್ದರು. ಮೆಕ್ಕೆಜೋಳದ ಕೊಯ್ಲು ಮಾಡಿ ರಾಶಿ ಹಾಕಿದ್ದರು. ರಾತ್ರಿ ಬೆಳಗಾಗುವಷ್ಟರಲ್ಲಿ ನಾಲ್ವರು ದುಷ್ಕರ್ಮಿಗಳು ಮೆಕ್ಕೆಜೊಲದ ರಾಶಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮೆಕ್ಕೆಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಕ್ಕೆಜೋಳದ ರಾಶಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ರೈತ ಕುಟುಂಬ ಕಂಗಾಲಾಗಿದ್ದು, ಇಡೀ ಕುಟುಮ್ಬವೇ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದೆ. ಗ್ರಾಮಸ್ಥರು ಕುಟುಂಬವನ್ನು ತಡೆದು ರಕ್ಷಿಸಿದ್ದಾರೆ. 60 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮಾರುಕಟ್ಟೆಗೆ ಸಾಗಿಸಲೆಂದು ರಾಶಿ ಹಾಕಿ ಇಟ್ಟಿದ್ದ ಮೆಕ್ಕೆಜೋಳ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸುಟ್ಟು ಹೋಗಿದ್ದು, ರೈತ ಕುಟುಂಬ ಕಣ್ಣಿರಿಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular