HomeLatest Newsಪುತ್ರಿಯ ಮೇಲೆ ನಿರಂತರ 3 ವರ್ಷ ಲೈಂಗಿಕ ದೌರ್ಜನ್ಯ: ತಂದೆಗೆ ಮೂರು ಜೀವಾವಧಿ ಶಿಕ್ಷೆ, ಸಾಯುವವರೆಗೂ...

ಪುತ್ರಿಯ ಮೇಲೆ ನಿರಂತರ 3 ವರ್ಷ ಲೈಂಗಿಕ ದೌರ್ಜನ್ಯ: ತಂದೆಗೆ ಮೂರು ಜೀವಾವಧಿ ಶಿಕ್ಷೆ, ಸಾಯುವವರೆಗೂ ಜೈಲು…!

ತಿರುವನಂತಪುರಂ: ತನ್ನ ಅಪ್ರಾಪ್ತ ಪುತ್ರಿಯ 3 ವರ್ಷ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕೇರಳದ ಇಡುಕ್ಕಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ.

ಪುತ್ರಿ 5 ವರ್ಷದವಳಾಗಿದ್ದಾಗಿನಿಂದ ಎಂಟು ವರ್ಷದವಳಾಗುವವರೆಗೆ ಸತತ ಮೂರು ವರ್ಷ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 3 ಜೀವಾವಧಿ ಶಿಕ್ಷೆ ಜತೆಗೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕರಿಮನೂರ್ ಬಳಿಯ ಬಾಡಿಗೆ ಮನೆಯಲ್ಲಿದ್ದಾಗ ಅಪರಾಧಿ ಈ ಕೃತ್ಯ ಎಸಗಿದ್ದ. 2020ರಲ್ಲಿ ಘಟನೆ ಬೆಳಕಿಗೆ ಬಂದಿತ್ತು. ನಿರಂತರ ಹೊಟ್ಟೆ ನೋವಿನಿಂದ ಒಡಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡಾಗ ತಂದೆಯ ಕೃತ್ಯಗಳಿಂದ ಈ ರೀತಿ ಆಗಿದೆಯೇ ಎಂದು ತಾಯಿಯನ್ನು ಬಾಲಕಿ ಪ್ರಶ್ನಿಸಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿ ಏನಾಗಿದೆ ಎಂದು ಸಮಾಧಾನದಿಂದ ವಿವರವಾಗಿ ಕೇಳಿದಾಗ ಮತ್ತು ಕೌನ್ಸೆಲಿಂಗ್ ಸಮಯದಲ್ಲಿ ತನ್ನ ತಂದೆಯ ಕೃತ್ಯದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಳು. ಕರಿಮನೂರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಇಡುಕ್ಕಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ.

ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಅಭಿಯೋಜಕ ಶಿಜೋಮನ್ ಜೋಸೆಫ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular