HomeLatest Newsಗ್ರಾಹಕರೇ ಎಚ್ಚರ : ತೂಕ-ಅಳತೆ-ಸಾಧನಗಳ ಪ್ರಮಾಣೀಕರಣ ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಲು ಸೂಚನೆ

ಗ್ರಾಹಕರೇ ಎಚ್ಚರ : ತೂಕ-ಅಳತೆ-ಸಾಧನಗಳ ಪ್ರಮಾಣೀಕರಣ ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಲು ಸೂಚನೆ

ಶಿವಮೊಗ್ಗ : ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ವರ್ತಕರು ಉಪಯೋಗಿಸುವ ತೂಕ/ಅಳತೆ/ತೂಕದ ಸಾಧನಗಳು/ಅಳತೆ ಸಾಧನಗಳು, ತೂಕ ಮತ್ತು ಅಳತೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಅವುಗಳ ನಿಖರತೆಗಾಗಿ ಪರಿಶೀಲಿಸಿ ಮುದ್ರೆ ಮಾಡಿಸಿಕೊಂಡಿದ್ದಾರೆಯೇ ಹಾಗೂ ಪ್ರಮಾಣ ಪತ್ರ ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಅಥವಾ ಸಾಮಗ್ರಿಗಳನ್ನು ಖರೀದಿಸಬೇಕೆಂದು ಕಾನೂನು ಮಾಪನಶಾಸ್ತ್ರ ಇಲಾಖೆ ತಿಳಿಸಿದೆ.

ಗ್ರಾಹಕರು ಅಂಗಡಿಯಲ್ಲಿ ವಸ್ತುಗಳನ್ನ ಖರೀದಿಸುವಾಗ ತಯಾರಕರ/ಪ್ಯಾಕರ್ ರವರ/ಆಮದುದಾರರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ, ಸಾಮಗ್ರಿ ಅಥವಾ ವಸ್ತುವಿನ ಹೆಸರು, ಸಾಮಗ್ರಿಯ ನಿವ್ವಳ ತೂಕ( ಸ್ಟ್ಯಾಂಡರ್ಡ್ ಯೂನಿಟ್ಗಳಲ್ಲಿ-ಗ್ರಾಂ/ಲೀಟರ್/ಸಂಖ್ಯೆ), ಸಾಮಗ್ರಿಗಳು ತಯಾರಾದ ತಿಂಗಳು ಮತ್ತು ವರ್ಷ, ಎಂಆರ್ಪಿ ಅಥವಾ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ರೂ….(ಎಲ್ಲಾ ತೆರಿಗೆ ಸೇರಿ), ಅನ್ವಯಿಸುವಂಥ ಪದಾರ್ಥಗಳಿಗೆ ಸಾಮಗ್ರಿ ಅಳತೆ(ಸ್ಟ್ಯಾಂಡರ್ಡ್ ಯೂನಿಟ್ಗಳಲ್ಲಿ) ಪರಿಶೀಲಿಸಿಕೊಳ್ಳಬೇಕು.

ಪೊಟ್ಟಣ ಸಾಮಗ್ರಿಗಳನ್ನು ಎಂಆರ್ಪಿ ಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವುದು ದಂಡಾರ್ಹ ಅಪರಾಧ. ಪೊಟ್ಟಣ ಸಾಮಗ್ರಿಗಳ ಮೇಲೆ ಎಂಆರ್ಪಿ/ಮೇಲೆ ಹೇಳಲಾದ ಯಾವುದೇ ಕಡ್ಡಾಯ ಘೋಷಣೆಗಳನ್ನು ತಿದ್ದುವುದು/ಅಳಿಸುವುದು/ಸ್ಟಿಕ್ಕರ್ ಬಳಸಿ ಮಾರ್ಪಡಿಸುವುದು ದಂಡಾರ್ಹ ಅಪರಾಧವಾಗಿದೆ. ಉಲ್ಲಂಘನೆಗಳು ಏನಾದರೂ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 18005991100 ಗೆ ದೂರನ್ನು ಸಲ್ಲಿಸಬಹುದು. ಹಾಗೂ ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕರ ಕಚೇರಿ, ಜಿಲ್ಲಾ ಮಾಪನ ಭವನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಮಾಧವ ಮಂಗಲ ಸಭಾಭವನದ ಹತ್ತಿರ, ಸಾಗರ ರಸ್ತೆ ಶಿವಮೊಗ್ಗ ಇಲ್ಲಿ ಸಹ ದೂರನ್ನು ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರ್ತಕರು/ಮಾರಾಟಗಾರರು/ನ್ಯಾಯಬೆಲೆ ಅಂಗಡಿಗಳು/ಪೆಟ್ರೋಲ್ ಬಂಕ್ಗಳು/ಕೈಗಾರಿಕೋದ್ಯಮಗಳು ದಿ ಲೀಗಲ್ ಮೆಟ್ರಾಲಜಿ ಆಕ್ಟ್ 2009, ಪೊಟ್ಟಣ ಸಾಮಗ್ರಿ ನಿಯಮ 2011 ಹಾಗೂ ಇತರೆ ನಿಯಮಗಳು 2011 ರ ಮೇಲ್ಕಂಡ ಅಂಶಗಳನ್ನು ಕಡ್ಡಾಯವಾಗಿ ಚಾಚೂ ತಪ್ಪದೇ ಪಾಲಿಸಿ ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಸದರಿ ನಿಯಮಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.

ಈ ನಿಟ್ಟಿನಲ್ಲಿ ಇಲಾಖೆಯು ಈಗಾಗಲೇ ಸುಮೊಟೊ ಅಧಿಕಾರದಲ್ಲಿ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular