ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಪ್ರತಿದಿನ ಹೀಗೆ ಸೇವಿಸಿ ನೆಲ್ಲಿಕಾಯಿ

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅನೇಕ ಗಿಡಮೂಲಿಕೆಗಳಲ್ಲಿ ನೆಲ್ಲಿಕಾಯಿ ಒಂದು. ಇದು ಹುಳಿ, ಕಹಿ, ಸಿಹಿ, ಮಿಶ್ರಿತವಾಗಿದೆ. ಇದನ್ನು ಮಧುಮೇಹಿಗಳು ಪ್ರತಿದಿನ ತಮ್ಮ ಆಹಾರದಲ್ಲಿ ಈ ರೀತಿಯಲ್ಲಿ ಸೇರಿಸಿಕೊಳ್ಳಟಬಹುದು.

*ನೆಲ್ಲಿಕಾಯಿಯನ್ನು ಪ್ರತಿದಿನ ಹಸಿಯಾಗಿ ತಿನ್ನಬಹುದು. ಇದನ್ನು ತಿಂದ ಬಳಿಕ ಒಂದು ಲೋಟ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

*ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ . ಇದನ್ನು ಹಣ್ಣುಗಳ ಸಲಾಡ್ ಮತ್ತು ತರಕಾರಿಗಳಲ್ಲಿ ಸೇರಿಸಿ ತಿಂದರೆ ತುಂಬಾ ಒಳ್ಳೆಯದು.

* ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ಜ್ಯೂಸ್ ತಯಾರಿಸಿ. ಇದನ್ನು ದಿನಕ್ಕೆ 10 ಮಿಲಿಯಷ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಣದಲ್ಲಿರುವುದಲ್ಲದೇ ತೂಕವನ್ನು ಕಾಪಾಡಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read