HomeKarnatakaBengaluru : ಸೂರ್ಯ ನಗರದ ನಾಲ್ಕನೇ ಹಂತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ಮಾದರಿ ಶಾಲೆ ನಿರ್ಮಾಣ...

Bengaluru : ಸೂರ್ಯ ನಗರದ ನಾಲ್ಕನೇ ಹಂತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ಮಾದರಿ ಶಾಲೆ ನಿರ್ಮಾಣ – ಸಚಿವ ಜಮೀರ್

ಬೆಂಗಳೂರು : ಗೃಹ ಮಂಡಳಿಯ ಸೂರ್ಯ ನಗರ ನಾಲ್ಕನೇ ಹಂತದಲ್ಲಿ 100 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಇಂದು ಅವರು ಸಂಸದ ಡಿ. ಕೆ. ಸುರೇಶ್ ಹಾಗೂ ಶಾಸಕ ಶಿವಣ್ಣ ಅವರೊಂದಿಗೆ ಸೂರ್ಯ ನಗರ ನಾಲ್ಕನೇ ಹಂತದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, 100 ಎಕರೆಯಲ್ಲಿ ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಎಲ್ಲ ಕ್ರೀಡೆಗೆ ಅವಕಾಶ ಇರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಹಾಗೂ 10 ಎಕರೆ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಾಣದ ಬೇಡಿಕೆಗೆ ಸ್ಪಂದಿಸಿ ಈ ಕುರಿತು ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆ ನಂತರ ಮಾತನಾಡಿದ ಅವರು, ಸೂರ್ಯ ನಗರ ವಸತಿ ಬಡಾವಣೆಗೆ ಜಮೀನು ಕೊಟ್ಟ ರೈತರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು. ಈ ಭಾಗದಲ್ಲಿ ಕ್ರೀಡಾಂಗಣ ಮತ್ತು ಶಾಲೆ ನಿರ್ಮಾಣ ಕುರಿತು ಸಂಸದ ಸುರೇಶ್ ಹಾಗೂ ಶಾಸಕ ಶಿವಣ್ಣ ಅವರ ಪ್ರಸ್ತಾವನೆಗೆ ನನ್ನ ಸಮ್ಮತಿಯೂ ಇದೆ ಎಂದು ಹೇಳಿದರು.
ಸೂರ್ಯನಗರ ನಾಲ್ಕನೇ ಹಂತ ಬಡಾವಣೆ ಒಳ್ಳೆಯ ಜಾಗದಲ್ಲಿ ಬರುತಿದ್ದು, ಜಮೀನು ಮಾಲೀಕರು ಹಾಗೂ ಗೃಹ ಮಂಡಳಿ 50:50 ಹಂಚಿಕೆ ಆಧಾರದಲ್ಲಿ ರಚನೆ ಮಾಡಲಾಗುತ್ತಿದೆ. ಇಪ್ಪತ್ತು ಸಾವಿರ ನಿವೇಶನ ರಚನೆ ಆಗಲಿದ್ದು, ಜಮೀನು ಮಾಲೀಕರಿಗೆ ಅಭಿವೃದ್ಧಿ ಹೊಂದಿದ 10 ಸಾವಿರ ನಿವೇಶನ ನೀಡಿದರೆ ಉಳಿದ 10 ಸಾವಿರ ನಿವೇಶನ ಹಂಚಿಕೆಗೆ ಲಭ್ಯ ವಾಗಲಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐದು ಗ್ರಾಮಗಳ 1938 ಎಕರೆ ಪ್ರದೇಶದಲ್ಲಿ ಬಡಾವಣೆ ರಚನೆ ಆಗುತ್ತಿದ್ದು, 587 ಎಕರೆ ಸರ್ಕಾರಿ ಗೋಮಾಳವೂ ಸೇರಿದೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಸ್ಥಳೀಯರು ತ್ಯಾಜ್ಯ ವಿಲೇವಾರಿ ಘಟಕ, ಶಾಲೆ, ಚಿತಾಗಾರ, ಕ್ಲಬ್ ಗೆ ಜಾಗ ಒದಗಿಸಲು ಸಚಿವರಿಗೆ ಮನವಿ ಸಲ್ಲಿಸಿದರು. ಜಮೀನು ಮಾಲೀಕರು ಅಹವಾಲು ಸಲ್ಲಿಸಿದರು.
ಇದಕ್ಕೂ ಮುನ್ನ ಸಚಿವರು ಸೂರ್ಯ ನಗರ ಮೊದಲನೇ ಹಂತ ದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ವೀಕ್ಷಿಸಿ ದರು.ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹ ಮಂಡಳಿ ಆಯುಕ್ತ ರಾದ ಕವಿತಾ ಮನ್ನಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಸುಶೀಲಮ್ಮ, ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular