HomeKarnatakaHDK ಜೊತೆಗೆ ಹೋಗಿದ್ದರೆ ಹೈಕಮಾಂಡ್ ಭೇಟಿಯಾಗಬಹುದಿತ್ತು; A ಟೀಂ ಗಿಂತ B ಟೀಂ ಮೇಲೆಯೇ ಪ್ರೀತಿ...

HDK ಜೊತೆಗೆ ಹೋಗಿದ್ದರೆ ಹೈಕಮಾಂಡ್ ಭೇಟಿಯಾಗಬಹುದಿತ್ತು; A ಟೀಂ ಗಿಂತ B ಟೀಂ ಮೇಲೆಯೇ ಪ್ರೀತಿ ಜಾಸ್ತಿಯೇ?; ಬಿಜೆಪಿ ಕಾಲೆಳೆದ ಕಾಂಗ್ರೆಸ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಟಾಂಗ್ ನೀಡಿದೆ.

ಹೆಚ್.ಡಿ.ಕುಮಾರಸ್ವಾಮಿಯವರ ಜೊತೆಗೆ ತೆರಳಿದ್ದರೆ ಹೈಕಮಾಂಡ್ ಭೇಟಿ ಸುಲಭವಾಗುತ್ತಿತ್ತು ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರ ಕಾಲೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಬಿಜೆಪಿ ನಾಯಕರನ್ನೇ ಭೇಟಿಮಾಡಲೊಪ್ಪದ ಬಿಜೆಪಿ ಹೈಕಮಾಂಡ್ ನಾಯಕರು ಜೆಡಿಎಸ್ ನಾಯಕರನ್ನು ನಿರಾಯಾಸವಾಗಿ ಭೇಟಿಯಾಗುತ್ತಾರೆ. ‘ಎ’ ಟೀಂ ಗಿಂತ ‘ಬಿ’ ಟೀಂ ಮೇಲೆಯೇ ಪ್ರೀತಿ ಜಾಸ್ತಿಯೇ? ಎಂದು ಪ್ರಶ್ನಿಸಿದೆ.

ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಜೊತೆಗೆ ಹೋಗಿದ್ದರೆ ಹೈಕಮಾಂಡ್ ನಾಯಕರ ಭೇಟಿ ಸುಲಭವಾಗುತ್ತಿತ್ತು. ವಿಪಕ್ಷ ನಾಯಕನ ಆಯ್ಕೆಯನ್ನು ಚರ್ಚಿಸಬಹುದಿತ್ತು ಎಂದು ಲೇವಡಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular