HomeKarnatakaಇನ್ನಾದರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಘನತೆಯಿಂದ ನಡೆದುಕೊಳ್ಳಿ: ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಕಿವಿಮಾತು

ಇನ್ನಾದರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಘನತೆಯಿಂದ ನಡೆದುಕೊಳ್ಳಿ: ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಕಿವಿಮಾತು

ಬೆಂಗಳೂರು: ಮನಸ್ಸಿಗೆ ಬಂದಂತೆ ಮಾತನಡಿ ಬಳಿಕ ಕ್ಷಮೆ ಕೇಳುವ ಬಿಜೆಪಿ ನಾಯಕರ ರೀತಿಗೆ ರಾಜ್ಯ ಕಾಂಗ್ರೆಸ್ ಟೀಕಿಸಿದೆ. ಕ್ಷಮೆ ಕೇಳುವುದು ಬಿಜೆಪಿ ಪರಂಪರೆಯಿಂದ ಬಂದ ಗುಣ! ಎಂದು ಟಾಂಗ್ ನೀಡಿದೆ.

ಪ್ರಧಾನಿ ಮೋದಿಯವರಿಂದ ಹಿಡಿದು ಶೋಭಾ ಕರಂದ್ಲಾಜೆಯವರವರೆಗೆ ಬಿಜೆಪಿಯವರೆಲ್ಲರೂ ಸಾವರ್ಕರ್ ಸಿದ್ದಾಂತ ಪಾಲಿಸುತ್ತಿದ್ದಾರೆ! ಆತ್ಮಸಾಕ್ಷಿಗೆ ವಿರುದ್ಧವಾಗಿ, ನಾಲಿಗೆಯ ಮೇಲಿನ ಹಿಡಿತ ಕಳೆದುಕೊಂಡು ಮಾತಾಡುವ ಬಿಜೆಪಿಗರು ನಂತರ ಕ್ಷಮೆ ಕೇಳುವುದು ರಾಜಕೀಯ ವ್ಯವಸ್ಥೆಯ ದುರಂತ ಎಂದು ಕಿಡಿಕಾರಿದೆ.

ಶೋಭಾ ಕರಂದ್ಲಾಜೆ ಅವರೇ ಇನ್ನಾದರೂ ಬಾಯಿಗೆ ಬಂದಂತೆ ಮಾತಾಡುವುದನ್ನು ಬಿಟ್ಟು ಘನತೆಯಿಂದ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳುನಾಡಿನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ತಮಿಳರ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮದ್ರಾಸ್ ಹೈಕೋರ್ಟ್ ನಲ್ಲಿ ಕ್ಷಮೆ ಕೋರಿದ್ದರು. ಈ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular