HomeEntertainmentಸೀರೆಯಲ್ಲಿ ಮಿಂಚಿದ 'ಭೀಮ' ನಾಯಕಿ ಅಶ್ವಿನಿ ಅಂಬರೀಶ್

ಸೀರೆಯಲ್ಲಿ ಮಿಂಚಿದ ‘ಭೀಮ’ ನಾಯಕಿ ಅಶ್ವಿನಿ ಅಂಬರೀಶ್

ನಾಟಿ ಕ್ರಶ್ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ‘ಭೀಮ’ ಚಿತ್ರದ ನಾಯಕಿ ಅಶ್ವಿನಿ ಅಂಬರೀಶ್ ಇತ್ತೀಚಿಗಷ್ಟೇ ಗುಲಾಬಿ ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದು, ಒಂದೊಂದಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ನಾಟಿ ಕ್ರಶ್, ಬ್ಲಾಕ್ ಬ್ಯೂಟಿ, ಗಾರ್ಜಿಯಸ್ ಹೀಗೆ ಬಗೆ ಬಗೆಯ ಕಮೆಂಟ್ಗಳನ್ನು ಮಾಡಿದ್ದಾರೆ.

ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆಕಂಡಿದ್ದ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮ ಚಿತ್ರ ಸ್ಯಾಂಡಲ್ವುಡ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ತನ್ನ ನಾಗಲೋಟವನ್ನು ಮುಂದುವರಿಸಿದೆ. ದುನಿಯಾ ವಿಜಯ್ ಅವರ ಮಾಸ್ ಲುಕ್ ಹಾಗೂ ಡೈಲಾಗ್ ಗೆ ಪ್ರೇಕ್ಷಕರು ಫಿದಾ ಆಗಿದ್ದು, ಈ ಚಿತ್ರದ ನಾಯಕಿ ಅಶ್ವಿನಿ ಅಂಬರೀಶ್ ಕೂಡ ಎಲ್ಲರ ಗಮನ ಸೆಳೆದಿದ್ದಾರೆ.

‘ಭೀಮ’  ಚಿತ್ರವನ್ನುಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ ಫಿಲಂಸ್ ಬ್ಯಾನರ್ ನಲ್ಲಿ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಶಿವ ಸೇನಾ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular