HomeKarnatakaಬಸವಣ್ಣನವರ ವಿಚಾರಧಾರೆಗೆ ತಣ್ಣೀರು ಎರಚಿದ ಕಾಂಗ್ರೆಸ್: ಸಂಸದ ರಾಘವೇಂದ್ರ

ಬಸವಣ್ಣನವರ ವಿಚಾರಧಾರೆಗೆ ತಣ್ಣೀರು ಎರಚಿದ ಕಾಂಗ್ರೆಸ್: ಸಂಸದ ರಾಘವೇಂದ್ರ

ಶಿವಮೊಗ್ಗ: ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33ರಷ್ಟು ಮೀಸಲಾತಿ ತರಲು ಲೋಕಸಭೆಯಲ್ಲಿ ಮಂಡನೆಯಾದ ನಾರಿಶಕ್ತಿ ವಂದನಾ ಮಸೂದೆ ಪಾಸ್ ಆಗದಂತೆ ತಡೆಯುವ ಮೂಲಕ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಮಹಿಳೆಯರಿಗೆ ಸ್ವಾತಂತ್ರ್ಯ ಸಮ ಸಮಾಜ ಸ್ಥಾಪಿಸಲು ಹೋರಾಡಿದ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳಿಗೆ ತಣ್ಣೀರು ಎರಚುವ ಕೆಲಸ ಮಾಡಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ 12ನೇ ಶತಮಾನದ ಸಮಾಜ ಸುಧಾರಣೆಯ ಹರಿಕಾರರಾಗಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳನ್ನು ಕೋರಿ ಮಾತನಾಡಿ, ಬಸವಣ್ಣನವರು ಆಗಲೇ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ್ದರಲ್ಲದೆ, ಶರಣೆ ಅಕ್ಕ ಮಹಾದೇವಿ ತಾಯಿ ಮಹಿಳೆಯರಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಲಿಂಗ ಸಮಾನತೆ, ಸಮಸಮಾಜ ನಿರ್ಮಾಣದ ಪವಿತ್ರ ದಿನ ಇದಾಗಿದೆ. ಮಹಿಳೆ ಏನನ್ನಾದರೂ ಸಹಿಸಿಕೊಂಡಾಳು. ಆದರೆ ತನಗಾದ ಅವಮಾನವನ್ನು ಮಾತ್ರ ಸಹಿಸುವುದಿಲ್ಲ. ಬರುವ ದಿನಗಳಲ್ಲಿ ಕಾಂಗ್ರೆಸ್ಸನ್ನೂ ಕ್ಷಮಿಸುವುದಿಲ್ಲ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಅಂಗೀಕಾರವಾದ ನಾರಿಶಕ್ತಿ ವಂದನಾ, ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಸೇರಿದಂತೆ 3 ಮಸೂದೆಗಳನ್ನು ಜಾರಿಗೆ ತರಲು ಲೋಕಸಭೆಯಲ್ಲಿ ಪ್ರಯತ್ನಿಸಿದ್ದರು. ಈ ಕುರಿತು ಸುಧೀರ್ಘ ಚರ್ಚೆಯೂ ಆಯಿತು. ಆದರೆ ಕಾಂಗ್ರೆಸ್ ಸುಳ್ಳು ವಿಚಾರಗಳನ್ನು ಮುಂದಿಟ್ಟು ಎನ್.ಡಿ.ಎ.ಯ ಎಲ್ಲಾ ಪ್ರಯತ್ನಗಳನ್ನೂ ತಡೆಯುವ ಕೆಲಸ ಮಾಡಿತು ಎಂದು ಹರಿಹಾಯ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳಾ ಮಸೂದೆ ಸೋಲಲು ಕಾಂಗ್ರೆಸ್‌ನ ಷಡ್ಯಂತ್ರ್ಯ ಕಾರಣ ಎಂದು ಕಿಡಿಕಾರಿದ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆ ಪಾಸ್ ಆದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದ ಪರಿಣಾಮ ಆ ಭಾಗದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕಡಿಮೆ ಜನಸಂಖ್ಯೆ ಇರುವ ದಕ್ಷಿಣದ ರಾಜ್ಯಗಳಿಗೆ ಹೊಡೆತ ಬೀಳುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ದುರುದ್ಧೇಶದಿಂದ ಮಸೂದೆ ಸೋಲುಣ್ಣುವಂತೆ ಮಾಡಿತಲ್ಲದೆ ಮಸೂದೆ ಮೂಲೆಗುಂಪು ಆಗುವಂತೆ ನೋಡಿಕೊಂಡಿತು ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಜಾರಿಗೆ ತಂದ ಸಾಮಾಜಿಕ ಯೋಜನೆಗಳು, ಜನ್ ಧನ್, ಡಿಜಿಟಲ್ ಪಾವತಿ, ಜಿ.ಎಸ್.ಟಿ. ಆರ್ಟಿಕಲ್ 370 ರದ್ದತಿ ಮೊದಲಾದವುಗಳನ್ನು ದೇಶ ವಿಭಜನೆ ಮಾಡಿದ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ಮಸೂದೆ ಮಂಡನೆಗೂ ಮುನ್ನ ಪ್ರಧಾನಿಗಳು ಸರ್ವಪಕ್ಷಗಳ ಸಭೆ ಕರೆದಿದ್ದರು. ಕಾಂಗ್ರೆಸ್ ಹೊರತು ಪಡಿಸಿ ಉಳೆದಲ್ಲ ಪಕ್ಷಗಳ ಮುಖಂಡರು ಅದರಲ್ಲಿ ಭಾಗವಹಿಸಿದ್ದರು. ಆದರೂ ಮಸೂದೆಯ ವಿರುದ್ಧವಾಗಿ ಅವರು ಮತ ಚಲಾಯಿಸಿ ಮಸೂದೆಯನ್ನು ಸೋಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಸುರೇಖಾ ಮುರಳೀಧರ್, ಎಂ.ಬಿ.ಹರಿಕೃಷ್ಣ, ಮೋಹನ್ ರೆಡ್ಡಿ, ರಶ್ಮಿ ಶ್ರೀನಿವಾಸ್, ಸಂತೋಷ್, ರಾಜೇಶ್ ಕಾಮತ್, ಮಂಜುನಾಥ್, ಚಂದ್ರಶೇಖರ್ ಮೊದಲಾದವರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular