HomeIndiaಒಂದು ರಾಜ್ಯಸಭೆ ಸೀಟು ಎರಡು ಪಕ್ಷಗಳ ಕಣ್ಣು: ಪವಾರ್‌ ಪವರ್‌ ಫುಲ್!

ಒಂದು ರಾಜ್ಯಸಭೆ ಸೀಟು ಎರಡು ಪಕ್ಷಗಳ ಕಣ್ಣು: ಪವಾರ್‌ ಪವರ್‌ ಫುಲ್!

ಮಹಾರಾಷ್ಟ್ರದಿಂದ 7 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಬೇಕಿದೆ. ನಾಮಪತ್ರ ಸಲ್ಲಿಕೆ ಮಾಡಲು ಗುರುವಾರ ಕೊನೆಯ ದಿನವಾಗಿದೆ. ಒಂದು ಸೀಟಿನ ಮೇಲೆ ಮಹಾರಾಷ್ಟ್ರ ರಾಜ್ಯದ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ್ ಅಘಾಡಿ (ಎಂವಿಎ) ಕಣ್ಣು ಬಿದ್ದಿದೆ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ. 85 ವರ್ಷದ ಶರದ್ ಪವಾರ್ ಮೈತ್ರಿಕೂಟದ ಪವರ್ ಫುಲ್ ನಾಯಕರಾಗಿ ಹೊರಹೊಮ್ಮಿದ್ದು, 11ನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷ ಶರದ್ ಪವಾರ್ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರ ಬಲ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣಾ ಲೆಕ್ಕಾಚಾರ

  • ಮಹಾರಾಷ್ಟ್ರ ವಿಧಾನಸಭೆಯಿಂದ 7 ರಾಜ್ಯಸಭಾ ಸದಸ್ಯರು ಆಯ್ಕೆಯಾಗಬೇಕು
  • 1 ಸೀಟು ಗೆಲ್ಲಲು 37 ಶಾಸಕರ ಬೆಂಬಲ ಅಗತ್ಯ
  • ಎಂವಿಎ ಮೈತ್ರಿಕೂಟದಲ್ಲಿ 46 ಶಾಸಕರಿದ್ದು, 1 ರಾಜ್ಯಸಭೆ ಸೀಟು ಗೆಲ್ಲಬಹುದು
  • ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಠಾಕ್ರೆ) 29, ಎನ್‌ಸಿಪಿ (ಶರದ್ ಪವಾರ್) 10 ಶಾಸಕರು
  • ಮಹಾಯತಿ ಮೈತ್ರಿಕೂಟದ ಶಾಸಕರ ಬಲ 288
  • ಮಹಾಯತಿ ಮೈತ್ರಿಕೂಟ 6 ಸೀಟುಗಳನ್ನು ಗೆಲ್ಲಲಿದೆ

 ಒಂದು ರಾಜ್ಯಸಭೆ ಸೀಟಿನ ಮೇಲೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳ ಕಣ್ಣಿದೆ. ಆದರೆ ಅಂತಿಮವಾಗಿ ಶರದ್ ಪವಾರ್ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತವಾಗುತ್ತಿದೆ.

ಈ ವಿಚಾರದಲ್ಲಿ ನೇತೃತ್ವ ವಹಿಸಿದ್ದು ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ. ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ ಅವರು ಬೆಂಬಲ ನೀಡುವಂತೆ ಮನವಿ ಮಾಡಿದರು. ಮಹಾರಾಷ್ಟ್ರ ಕಾಂಗ್ರೆಸ್ ನಾಯಕರೊಂದಿಗೆ ದಿನವಿಡೀ ಮಾತುಕತೆ ನಡೆಸಿ, ಹೈಕಮಾಂಡ್ ನಾಯಕರಿಗೆ ಸಂದೇಶ ಕಳಿಸಿದರು.

ಸುಪ್ರಿಯಾ ಸುಳೆ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿದ್ದರು. ಏಕೆಂದರೆ ಶಿವಸೇನೆ ಈ ಸ್ಥಾನದ ಮೇಲೆ ಕಣ್ಣಿಟ್ಟಿತ್ತು. ಅಂತಿಮವಾಗಿ ಎರಡು ಪಕ್ಷಗಳು ಒಪ್ಪಿಗೆ ನೀಡಿದ ಕಾರಣಕ್ಕೆ ಶರದ್ ಪವಾರ್ ಹಾದಿ ಸುಗಮವಾಗಿದೆ.

ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮಾತನಾಡಿ, ಶರದ್ ಪವಾರ್‌ಗಾಗಿ ತಾವು ಒಮ್ಮೆ ಸ್ಥಾನವನ್ನು ಬಿಟ್ಟುಕೊಟ್ಟಿದ್ದೆವು. ಆದರೆ ಈಗ ಪುನಃ ಅವರಿಗಾಗಿ ಸ್ಥಾನ ಬಿಟ್ಟುಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ದೆಹಲಿಗೆ ಕರೆ ಮಾಡಿ, ಅಲ್ಲಿನ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರೊಂದಿಗೆ ಸಮಾಲೋಚನೆ ನಡೆಸಿದಾಗ ಪವಾರ್‌ ಬೆಂಬಲಿಸಿ ಎನ್ನುವ ಸೂಚನೆ ಬಂದ ಕಾರಣ ಕಾಂಗ್ರೆಸ್ ಸಹ ಪವಾರ್ ಬೆಂಬಲಿಸಲು ಒಪ್ಪಿಗೆಯನ್ನು ನೀಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular