ಮಹಾದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ಕಾರಣ : ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ

ಹುಬ್ಬಳ್ಳಿ : ಮಹಾದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್‌ ಪಕ್ಷವೇ ಮೂಲ ಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಲಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್‌ ಪಕ್ಷವೇ ಕಾರಣ, ಮಹಾದಾಯಿ ಯೋಜನೆ ಸಂಬಂಧ ನ್ಯಾಯಾಧೀಕರಣಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ನ್ಯಾಯಾಧೀಕರಣ ಮಾಡಿದ್ದು, ಇದರಿಂದ ಮಹಾದಾಯಿ ಯೋಜನೆ 8-10 ವರ್ಷ ತಡವಾಯಿತು ಎಂದರು.

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್‌ ದೊಡ್ಡ ಅಪರಾಧ ಮಾಡಿದೆ. ನಾವು ಮಹಾದಾಯಿ-ಮಲಪ್ರಭಾ ನಡುವೆ ಇಂಟರ್‌ ಲಿಂಗಿಂಗ್‌ ಕಾಲುವೆ ಮಾಡಿದ್ದೇವು.  ಕಾಲುವೆಯಲಿ ಗೋಡೆ ಕಟ್ಟಿದ ಅಪಖ್ಯಾತಿ ಕಾಂಗ್ರೆಸ್‌ ಗೆ ಇದೆ ಎಂದು ಕಿಡಿಕಾರಿದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read