HomeIndiaಕಾಂಗ್ರೆಸ್ ಅಭ್ಯರ್ಥಿಗಳ ಹೊಸ ಪಟ್ಟಿ ಬಿಡುಗಡೆ: ಕನ್ಹಯ್ಯಾ ಕುಮಾರ್, ಚನ್ನಿಗೆ ಟಿಕೆಟ್ ಘೋಷಣೆ

ಕಾಂಗ್ರೆಸ್ ಅಭ್ಯರ್ಥಿಗಳ ಹೊಸ ಪಟ್ಟಿ ಬಿಡುಗಡೆ: ಕನ್ಹಯ್ಯಾ ಕುಮಾರ್, ಚನ್ನಿಗೆ ಟಿಕೆಟ್ ಘೋಷಣೆ

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದ್ದು, ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಇನ್ನೂ 10 ಲೋಕಸಭಾ ಅಭ್ಯರ್ಥಿಗಳನ್ನು ಘೋಷಿಸಿದೆ.

ಕಾಂಗ್ರೆಸ್ ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್, ಜಲಂಧರ್‌ನಿಂದ ಚರಂಜಿತ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಂದಿನಿ ಚೌಕ್‌ನಿಂದ ಹಿರಿಯ ನಾಯಕ ಜೆ.ಪಿ. ಅಗರ್ವಾಲ್, ಈಶಾನ್ಯ ದೆಹಲಿಯಿಂದ ಜೆಎನ್‌ಯುಎಸ್‌ಯು ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ವಾಯುವ್ಯ ದೆಹಲಿಯಿಂದ ಉದಿತ್ ರಾಜ್ ಅವರನ್ನು ಕಣಕ್ಕಿಳಿಸಿದೆ.

ಕನ್ಹಯ್ಯಾ ಕುಮಾರ್ ಈಶಾನ್ಯ ದೆಹಲಿಯಿಂದ(ಬಿಜೆಪಿ ಈಶಾನ್ಯ ದೆಹಲಿ ಅಭ್ಯರ್ಥಿ ಮನೋಜ್ ತಿವಾರಿ ವಿರುದ್ಧ), ಜೆಪಿ ಅಗರ್ವಾಲ್ ಚಾಂದಿನಿ ಚೌಕದಿಂದ(ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೇಲ್ವಾಲ್ ವಿರುದ್ಧ), ಉದಿತ್ ರಾಜ್ ವಾಯುವ್ಯ ದೆಹಲಿಯಿಂದ (ಯೋಗೇಂದ್ರ ಚಂದೋಲಿಯಾ ವಿರುದ್ಧ) ಸ್ಪರ್ಧಿಸಲಿದ್ದಾರೆ.

ಪಂಜಾಬ್‌ನಲ್ಲಿ ಅಮೃತಸರದಿಂದ ಗುರ್ಜೀತ್ ಸಿಂಗ್ ಔಜ್ಲಾ ಅವರು ಬಿಜೆಪಿ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ವಿರುದ್ಧ ಸ್ಪರ್ಧಿಸಲಿದ್ದಾರೆ, ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಜಲಂಧರ್‌ನಿಂದ(ಎಸ್‌ಸಿಗೆ ಮೀಸಲು), ಪಟಿಯಾಲದಿಂದ ಮಾಜಿ ಎಎಪಿ ನಾಯಕ ಡಾ.ಧರಮ್‌ವೀರ್ ಗಾಂಧಿ ವಿರುದ್ಧ ಕಣಕ್ಕಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular