HomeUncategorizedರಾಜ್ಯದಲ್ಲಿ ಪವರ್ ಪಾಲಿಟಿಕ್ಸ್ ನಡುವೆಯೇ ಆರಂಭವಾಯ್ತು ಟೂರ್ ಪಾಲಿಟಿಕ್ಸ್: ಕಾಂಗ್ರೆಸ್ ಹೈಕಮಾಂಡ್ ಗೆ ಶುರುವಾಯ್ತು ಹೊಸ...

ರಾಜ್ಯದಲ್ಲಿ ಪವರ್ ಪಾಲಿಟಿಕ್ಸ್ ನಡುವೆಯೇ ಆರಂಭವಾಯ್ತು ಟೂರ್ ಪಾಲಿಟಿಕ್ಸ್: ಕಾಂಗ್ರೆಸ್ ಹೈಕಮಾಂಡ್ ಗೆ ಶುರುವಾಯ್ತು ಹೊಸ ತಲೆನೋವು

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ಮುನ್ನೆಲೆಗೆ ಬಂದಿರುವಾಗಲೇ ಶಾಸಕರ ವಿದೇಶ ಪ್ರವಾವ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಕ್ಷದಲ್ಲಿನ ಅಸಮಾಧಾನ ಮತ್ತಷ್ಟು ತಾರಕಕ್ಕೇರಿದೆ. ರಾಜ್ಯ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಹೈಕಮಾಂಡ್‌ ಮಟ್ಟದಲ್ಲಿ ಗಮನ ಸೆಳೆದಿದೆ.

ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿತ್ತು. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆ ಎಂದು ಹೇಳಲಗುತ್ತಿದೆ. ಶಾಸಕರ ವಿದೇಶ ಪ್ರವಾಸದ ಬಗ್ಗೆ ಸ್ವಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ಈ ಬೆಳವಣಿಗೆ ನಡುವೆಯೇ ಕಾಂಗ್ರೆಸ್ ನಾಯಕರು ಪ್ರವಾಸದ ಕುರಿತು ಸಂಪೂರ್ಣ ವರದಿ ಸಲ್ಲಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಜನರು ಸಮಸ್ಯೆ, ಕುಂದು-ಕೊರತೆಗಳ ಬಗ್ಗೆ ಅಗಮನ ಹರಿಸುವುದನ್ನು ಬಿಟ್ಟು ಆಡಳಿತ ಪಕ್ಷದಲ್ಲಿ ಒಂದೆಡೆ ಕುರ್ಚಿಗಾಗಿ ಕಿತ್ತಾಟ ಆರಂಭವಾಗಿದ್ದರೆ, ಮತ್ತೊಂದೆಡೆ ಶಾಸಕರು ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿರುವುದು ವಿಪಕ್ಷಗಳಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಅಧ್ಯಯನ ಪ್ರವಾಸ ಎಂದು ಕೆಲವು ಶಾಸಕರು ಸ್ಪಷ್ಟಪಡಿಸಿದರೆ, ಇನ್ನೂ ಕೆಲವರು ಪ್ರವಾಸದ ಉದ್ದೇಶದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರವಾಸಕ್ಕೆ ಸರ್ಕಾರದಿಂದ ಎನ್‌ಒಸಿ ನೀಡಲು ಸಿಎಂ ಕಚೇರಿ ಮುಂದಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಕೌನ್ಸಲೇಟ್‌ಗಳಿಗೆ ವೀಸಾ ಪ್ರಕ್ರಿಯೆಗಾಗಿ ಸರ್ಕಾರದಿಂದ ಪತ್ರ ರವಾನೆಯಾಗಿದೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಇದು ಸರ್ಕಾರದ ಪ್ರವಾಸವೇ ಅಥವಾ ಖಾಸಗಿ ಪ್ರವಸವೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ವರದಿ ಕೇಳಿದೆ ಎನ್ನಲಾಗಿದೆ.

ಒಟ್ಟಾರೆ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಧಿಕಾರ ಹಸ್ತಾಂತರದ ಬಗೆಗಿನ ಚರ್ಚೆ ಮುಂದುವರೆದಿರುವಾಗಲೇ ಶಾಸಕರ ಫಾರಿನ್ ಟೂರ್ ಮತ್ತಷ್ಟು ಗೊಂದಲ, ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular