HomeKarnatakaಅನೇಕರ ಬಾಳಿಗೆ ಬೆಳಕಾದ ಅಂಗಾಂಗ ದಾನಿ ಕುಟುಂಬಕ್ಕೆ ಅಭಿನಂದನೆ: ಉಚಿತ ಶಿಕ್ಷಣ, ಉದ್ಯೋಗದ ಭರವಸೆ

ಅನೇಕರ ಬಾಳಿಗೆ ಬೆಳಕಾದ ಅಂಗಾಂಗ ದಾನಿ ಕುಟುಂಬಕ್ಕೆ ಅಭಿನಂದನೆ: ಉಚಿತ ಶಿಕ್ಷಣ, ಉದ್ಯೋಗದ ಭರವಸೆ

ವಿಜಯಪುರ: ಅಂಗಾಂಗ ದಾನ ಮಾಡಿ ಅಮರರಾದ ಬಲರಾಮ ಕೃಷ್ಣ ಬಾಗಲಕೋಟ್ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಲಾಗಿದ್ದು, BLDE ಸಂಸ್ಥೆಯಿಂದ ಉಚಿತ ಶಿಕ್ಷಣ ನೆರವು, ಉದ್ಯೋಗದ ಭರವಸೆ ನೀಡಲಾಗಿದೆ.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಇಂದು BLDE ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಿಜಯಪುರದ ಯುವಕ ಬಲರಾಮ ಕೃಷ್ಣ ಬಾಗಲಕೋಟ್ ಅವರು ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ. ಈ ದುಃಖದ ಕ್ಷಣದಲ್ಲೂ ಸಂಯಮ ಕಳೆದುಕೊಳ್ಳದೆ ಅವರ ಕುಟುಂಬವು ಅಂಗಾಂಗ ದಾನ ಮಾಡಲು ಸಹಮತ ನೀಡಿದ್ದು ಶ್ಲಾಘನೀಯ ಹಾಗೂ ಮಾದರಿ ಕಾರ್ಯವಾಗಿದೆ. ಸಾವಿನ ನಂತರವೂ ಅನೇಕ ಜೀವಗಳಿಗೆ ಬೆಳಕಾಗಿರುವ ಈ ನಿರ್ಧಾರ ಮಾನವೀಯತೆಯ ಉನ್ನತ ಉದಾಹರಣೆ ಎಂದರು.

ಕುಟುಂಬದ ಮಹತ್ತರ ಸಹಕಾರಕ್ಕೆ ಧನ್ಯವಾದ ಹಾಗೂ ಅಭಿನಂದನೆ ಸಲ್ಲಿಸಲಾಯಿತು. ಕುಟುಂಬದ ಸದಸ್ಯರು ಬಯಸಿದಲ್ಲಿ BLDE ಸಂಸ್ಥೆಯಿಂದ ಉಚಿತ ಶಿಕ್ಷಣಕ್ಕೆ ನೆರವು ಮತ್ತು ಉದ್ಯೋಗದ ಅವಕಾಶವನ್ನು ಒದಗಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಧನಾನಂತರ ಅಂಗಾಂಗಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು, ಅವುಗಳನ್ನು ದಾನಮಾಡಿ ಹಲವರ ಬದುಕಿಗೆ ಆಶಾಕಿರಣವಾಗಿಸುವುದು ಮಹಾಪುಣ್ಯದ ಕಾರ್ಯ. ಇದು ಕೇವಲ ಒಂದು ಘಟನೆ ಆಗಿ ಉಳಿಯದೇ, ಸಮಾಜದಲ್ಲಿ ಒಂದು ಆಂದೋಲನವಾಗಿ ರೂಪುಗೊಳ್ಳಬೇಕು ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಕೈಗೊಳ್ಳಬೇಕು. ವಿದೇಶಗಳಲ್ಲಿ ಇರುವಂತೆಯೇ ನಮ್ಮ ದೇಶದಲ್ಲಿಯೂ ಅಂಗಾಂಗ ದಾನದ ಕುರಿತು ವ್ಯಾಪಕ ಅರಿವು ಮೂಡಿಸುವ ಕಾರ್ಯಗಳಾಗಬೇಕು. ಈ ಪವಿತ್ರ ಅಭಿಯಾನ ನನ್ನಿಂದಲೇ ಆರಂಭವಾಗಲು ನನ್ನ ಸಂಪೂರ್ಣ ಸಹಮತವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಲರಾಮ ಕೃಷ್ಣ ಬಾಗಲಕೋಟ್ ಅವರ ಕುಟುಂಬ ಸದಸ್ಯರು, BLDE-DU ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪ್ರಭಾರಿ ಕುಲಪತಿ ಡಾ. ಅರುಣ ಇನಾಮದಾರ ಮೊದಲಾದವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular