HomeLatest NewsSHOCKING : 'ಬಿಯರ್ ಬಾಟಲಿ'ಯಲ್ಲಿ ಕಾಂಡೋಮ್ ಪ್ಯಾಕೆಟ್ ಪತ್ತೆ ; ಬೆಚ್ಚಿಬಿದ್ದ ಗ್ರಾಹಕ |WATCH VIDEO

SHOCKING : ‘ಬಿಯರ್ ಬಾಟಲಿ’ಯಲ್ಲಿ ಕಾಂಡೋಮ್ ಪ್ಯಾಕೆಟ್ ಪತ್ತೆ ; ಬೆಚ್ಚಿಬಿದ್ದ ಗ್ರಾಹಕ |WATCH VIDEO

ತೆಲಂಗಾಣ : ಬಿಸಿಲಿನ ತಾಪಕ್ಕೆ ತಂಪಾದ ಬೀರ್ ಹೀರೋಣವೆಂದು ತೆರೆದರೆ, ಒಳಗೆ ಕಂಡಿದ್ದು ಮದ್ಯವಲ್ಲ, ಬದಲಿಗೆ ಕಾಂಡೋಮ್ ಪ್ಯಾಕೆಟ್! ಸಿದ್ದಿಪೇಟೆಯಲ್ಲಿ ನಡೆದ ಈ ಆಘಾತಕಾರಿ ಘಟನೆ ಮದ್ಯಪ್ರಿಯರಲ್ಲಿ ಆತಂಕ ಮೂಡಿಸಿದೆ.”ನಾವು ಕುಡಿಯುವ ಮದ್ಯ ಸುರಕ್ಷಿತವೇ? ಸಿದ್ದಿಪೇಟೆಯ ವೈನ್ ಶಾಪ್ ಒಂದರಲ್ಲಿ ಮಾರಾಟವಾದ ಬೀರ್ ಬಾಟಲಿಯೊಳಗೆ ಕಾಂಡೋಮ್ ಪ್ಯಾಕೆಟ್ ಪತ್ತೆಯಾಗಿರುವುದು ಕಂಪನಿಯ ಉತ್ಪಾದನಾ ಪ್ರಕ್ರಿಯೆಯ ಗುಣಮಟ್ಟದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೌದು. ಸಿದ್ದಿಪೇಟೆ ಜಿಲ್ಲೆಯಲ್ಲಿ ಮದ್ಯಪ್ರಿಯರೊಬ್ಬರಿಗೆ ಆಘಾತಕಾರಿ ಘಟನೆ ಎದುರಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ತಂಪಾದ ಬೀರ್ ಕುಡಿಯಲು ಹೋದರೆ, ಆ ಬಾಟಲಿಯೊಳಗೆ ಕಾಂಡೋಮ್ ಪ್ಯಾಕೆಟ್ ಪತ್ತೆಯಾಗಿದೆ.ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಭೂಂಪಲ್ಲಿ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮಂಗಳವಾರ ವೈನ್ ಶಾಪ್‌ಗೆ ಹೋಗಿ ಕಿಂಗ್‌ಫಿಷರ್ ಬೀರ್ ಬಾಟಲಿಯನ್ನು ಖರೀದಿಸಿದ್ದಾರೆ. ಬೀರ್ ಕುಡಿಯಲು ತೆರೆದಾಗ, ಬಾಟಲಿಯೊಳಗೆ ಏನೋ ತೇಲುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಕಾಂಡೋಮ್ ಪ್ಯಾಕೆಟ್ ಇರುವುದು ಕಂಡುಬಂದಿದೆ. ಇದರಿಂದ ಬೆಚ್ಚಿಬಿದ್ದ ಗ್ರಾಹಕ ಕೂಡಲೇ ವೈನ್ ಶಾಪ್‌ಗೆ ತೆರಳಿ ವಿಚಾರಿಸಿದ್ದಾರೆ. ಆದರೆ, ಅಂಗಡಿ ಮಾಲೀಕರು ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಗ್ರಾಹಕ, ಬೀರ್ ಬಾಟಲಿಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲದೆ, ಅದೇ ವೈನ್ ಶಾಪ್‌ನಲ್ಲಿ ಈ ಹಿಂದೆ ಖರೀದಿಸಿದ ಬೀರ್ ಬಾಟಲಿಯಲ್ಲಿ ಬೀರ್ ಬದಲಿಗೆ ಕೇವಲ ನೀರು ಮಾತ್ರ ಇತ್ತು ಎಂದು ಗ್ರಾಹಕ ಆರೋಪಿಸಿದ್ದಾರೆ. ಈ ಘಟನೆ ಕುರಿತು ಅಬಕಾರಿ (ಎಕ್ಸೈಜ್) ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಬೀರ್ ಬಾಟಲಿಯೊಳಗೆ ಆ ಪ್ಯಾಕೆಟ್ ಹೇಗೆ ಬಂತು? ಉತ್ಪಾದನೆಯ ಸಮಯದಲ್ಲಿನ ನಿರ್ಲಕ್ಷ್ಯವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular