ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಉಂಟಾಗಿದೆ. ಇಂಧನ ಪೂರೈಕೆಯ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಇದರಿಂದಾಗಿ ದೇಶದಾದ್ಯಂತ ಅನೇಕ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯನ್ನು ಎದುರಿಸುತ್ತಿವೆ.
ಮಂಗಳವಾರದಿಂದ ದೇಶದಲ್ಲಿ ತೀವ್ರ ಸಂಕಷ್ಟ ಎದುರಾಗಿದೆ. ಬೆಂಗಳೂರು ನಗರದಲ್ಲಿ ಹಲವು ಹೋಟೆಲ್ಗಳು ಮುಚ್ಚಿವೆ, ಮೆನುಗಳಲ್ಲಿ ಬದಲಾವಣೆ ಮಾಡಲಾಗಿದೆ. ಉದ್ಯಾನ ನಗರಿಯಲ್ಲಿ ಪಿಜಿಗಳಿಗೆ ಸಹ ಈಗ ಸಂಕಷ್ಟ ಎದುರಾಗಿದೆ.
ಬೆಂಗಳೂರು ನಗರದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳನ್ನು ರೂ. 4000 ಮತ್ತು 4,200 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಹಲವು ಬಡಾವಣೆಗಳಲ್ಲಿ ಸಿಲಿಂಡರ್ಗಳು ಇಲ್ಲ.
ಪಿಜಿಗಳಲ್ಲಿ ಮಧ್ಯಾಹ್ನದ ಊಟವಿಲ್ಲ: ಬೆಂಗಳೂರು ನಗರದಲ್ಲಿ ಹಲವು ವಿದ್ಯಾರ್ಥಿಗಳು, ಉದ್ಯೋಗಸ್ಥ ಯುವಕ/ ಯುವತಿಯರು ಪಿಜಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಪಿಜಿಗಳಲ್ಲಿ ಊಟ ವ್ಯವಸ್ಥೆ ಇಲ್ಲವಾಗಿದೆ.
ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪಿಜಿಗಳಿರುವುದು ವೈಟ್ಫೀಲ್ಡ್ ಭಾಗದಲ್ಲಿ. ಆದರೆ ಈಗ ಸಿಲಿಂಡರ್ ಕೊರತೆಯ ಕಾರಣ ಪಿಜಿ ಓನರ್ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವೈಟ್ಫೀಲ್ಡ್ ಪಿಜಿ ಓನರ್ಸ್ ವೆಲ್ಫೇರ್ ಅಸೋಶಿಯೇಷನ್ ಪ್ರಕಟಣೆಯೊಂದನ್ನು ಹೊರಡಿಸಿದೆ. ಸಿಲಿಂಡರ್ ಗ್ಯಾಸ್ ಕೊರತೆಯ ಕಾರಣ ಮುಂದಿನ ಕೆಲವು ದಿನಗಳ ತನಕ ಪಿಜಿಗಳಲ್ಲಿ ಮಧ್ಯಾಹ್ನದ ಊಟ ಇರುವುದಿಲ್ಲ.

ನೀವು ಅಡುಗೆ ಮಾಡಿಕೊಳ್ಳುವ ಸೌಲಭ್ಯ ಸಹ ಲಭ್ಯವಿಲ್ಲ. ನಾವು ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

