HomeKarnatakaBIG NEWS : ಹೊಯ್ಸಳ ವಾಹನದಲ್ಲಿ ಬಂದು ಕಲೆಕ್ಷನ್ ; ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

BIG NEWS : ಹೊಯ್ಸಳ ವಾಹನದಲ್ಲಿ ಬಂದು ಕಲೆಕ್ಷನ್ ; ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಜನರಿಂದ ಹಣ ವಸೂಲಿಗೆ ಮುಂದಾಗಿದ್ದ ಪೊಲೀಸರನ್ನು ‘ಕಳ್ಳ ಕಳ್ಳ ಪೊಲೀಸ್ ಕಳ್ಳ’ ಎಂದು ಸಾರ್ವಜನಿಕರೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಎ.ಎಸ್.ಐ ರಾಮಲಿಂಗಯ್ಯ, ಹೆಡ್ ಕಾನ್ಸ್ ಟೇಬಲ್ ಪ್ರಸನ್ನ ಎಂಬುವವರನ್ನು ಅಮಾನತು ಮಾಡಿ ನಗರ ಪೊಲೀಸ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಹೊಯ್ಸಳ ವಾಹನ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಇವರು ಅಸಲಿ ಅಲ್ಲ ನಕಲಿ ಪೊಲೀಸರು ಎಂದು ಸಾರ್ವಜನಿಕರು ಮೊಬೈಲ್ ವಿಡಿಯೋ ಮಾಡುತ್ತಾ ಅಟ್ಟಿಸಿಕೊಂಡು ಹೋಗಿದ್ದಾರೆ.ಕಳ್ಳ ಕಳ್ಳ ಪೊಲೀಸ್ ಕಳ್ಳ ಎಂದು ಕೋಗುತ್ತಾ ಬರುವುದನ್ನು ಕಂಡ ಪೊಲೀಸರು ಹೊಯ್ಸಳ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಸಾರ್ವಜನಿಕ ಕಷ್ಟಗಳಿಗೆ ನೆರವಾಗುವ ಪೊಲೀಸರು ಜನರಿಂದಲೇ ಹಣ ಸುಲಿಗೆ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹಲವು ಕಡೆ ಪೊಲೀಸರೇ ಜನರಿಂದ ಸುಲಿಗೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು  ಸಾರ್ವಜನಿಕರು  ಆಗ್ರಹಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular