HomeLatest Newsಕಾಫಿ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಳ್ಳತನ: ಆರು ಜನರ ಗ್ಯಾಂಗ್ ಅರೆಸ್ಟ್

ಕಾಫಿ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಳ್ಳತನ: ಆರು ಜನರ ಗ್ಯಾಂಗ್ ಅರೆಸ್ಟ್

ಹಾಸನ: ಕಾಫಿ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಫಿ ಬೆಳೆಯನ್ನು ಕಳ್ಳತನ ಮಾಡಿದ್ದ ಗ್ಯಾಂಗ್ ನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅರೇಹಳ್ಳಿ ಗ್ರಾಮದ ಶಾಹಿದ್ ಮುಬಾರಕ್, ಜಹೀರ್, ಸಾಗರ್ ಪ್ರಜ್ವಲ್, ಹಜೀಜ್, ಸುನಿಲ್ ಎಂದು ಗುರುತಿಸಲಾಗಿದೆ. ಸುನಿಲ್ ವ್ಯಾಪಾರಿಯಾಗಿದ್ದು, ಈತ ಕಳ್ಳತನ ಮಾಡಿದ್ದ ಕಾಫಿ ಬೀಜಗಳು ಎಂಬುದು ಗೊತ್ತಿದ್ದೂ ಖರೀದಿಸಿದ್ದ.

ಕೆಲ ದಿನಗಳ ಹಿಂದೆ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಹಣ್ಣುಗಳನ್ನು ಕಳ್ಳತನ ಮಾಡಲೆಂದು ಬಂದಿದ್ದ ಗ್ಯಾಂಗ್ ನ್ನು ತಡೆಯಲು ಹೋಗಿದ್ದ ಜಗನ್ನಾಥ್ ಶಟ್ಟಿ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಕಾಫಿ ತೋಟದಲ್ಲಿದ್ದ ಕಾಫಿ ಹಣ್ನುಗಳನ್ನು ಕದ್ದು ಪರಾರಿಯಾಗಿದ್ದರು. ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕಾಫಿ ಕಳ್ಳರ ಗ್ಯಾಅಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular