HomeLatest Newsಕರಾವಳಿ ಜಿಲ್ಲೆಗಳ ದ್ವೀಪಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧ: Eco-Tourism ಅಭಿವೃದ್ಧಿಪಡಿಸಲು ವ್ಯವಹಾರಣಾ ಸಲಹೆಗಾರರ ಆಯ್ಕೆ

ಕರಾವಳಿ ಜಿಲ್ಲೆಗಳ ದ್ವೀಪಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧ: Eco-Tourism ಅಭಿವೃದ್ಧಿಪಡಿಸಲು ವ್ಯವಹಾರಣಾ ಸಲಹೆಗಾರರ ಆಯ್ಕೆ

ಬೆಳಗಾವಿ: ರಾಜ್ಯದ ಕರಾವಳಿ ಪ್ರದೇಶದಲ್ಲಿನ 106 ದ್ವೀಪಗಳನ್ನು ಪರಿಸರ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವರು, ಉತ್ತರ ಕನ್ನಡ ಜಿಲ್ಲೆಯಲ್ಲಿನ 7 ದ್ವೀಪಗಳನ್ನು ಪರಿಸರ ಪ್ರವಾಸೋದ್ಯಮವಾಗಿ (Eco-Tourism) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP Model) ಅಭಿವೃದ್ಧಿಪಡಿಸಲು ವ್ಯವಹರಣಾ ಸಲಹೆಗಾರರನ್ನು (Transaction Advisor) ಆಯ್ಕೆ ಮಾಡಲಾಗಿದ್ದು, ಕಾರ್ಯ ಸಾಧ್ಯತಾ ವರದಿ (Feasibility Report) ತಯಾರಿಸಲಾಗುತ್ತಿದೆ

ಉಡುಪಿ ಜಿಲ್ಲೆಯ 7 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1 ದ್ವೀಪಗಳಿಗೆ Feasibility Report ತಯಾರಿಸಲಾಗಿದೆ. ಈ ಪೈಕಿ 3 ದ್ವೀಪಗಳಾದ ದರಿಯಾ ಬಹದ್ದೂರ್ ಘಡ, ಮಲ್ಪೆ ಮತ್ತು ಅಯಾಬಾ ದ್ವೀಪಗಳನ್ನು ಅಭಿವೃದ್ಧಿಪಡಿಸಲು GIS (Master Plan) ಸಿದ್ಧಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯವು ಸುಮಾರು 185.21 ನಾಟಿಕಲ್ ಮೈಲಿ (ಸುಮಾರು 343 ಕಿ.ಮೀ) ಕಡಲ ತೀರವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು 13 ಸಣ್ಣ ಬಂದರುಗಳು ಹಾಗೂ ಒಂದು ಬೃಹತ್ ಬಂದರು (ನವ ಮಂಗಳೂರು ಬಂದರು) ಇರುತ್ತದೆ.

2024-25ನೇ ಸಾಲಿನಲ್ಲಿ ಕಾರವಾರ ಬಂದರಿನಲ್ಲಿ 5,50,502 ಮೆಟ್ರಿಕ್ ಟನ್ ಸರಕು ನಿರ್ವಹಣೆ ಹಾಗೂ ಹಳೇ ಮಂಗಳೂರು ಬಂದರಿನಲ್ಲಿ 55,505 ಮೆಟ್ರಿಕ್ ಟನ್ ಸರಕು ನಿರ್ವಹಣೆ ವಾರ್ಷಿಕ ವಹಿವಾಟು ಮಾಡಲಾಗಿದ್ದು, ಉಳಿದ ಬಂದರುಗಳಲ್ಲಿ ಯಾವುದೇ ವಾಣಿಜ್ಯ ಸರಕು ವಹಿವಾಟು ನಡೆಯುತ್ತಿರುವುದಿಲ್ಲ. ರಾಜ್ಯದಲ್ಲಿ ಮೀನುಗಾರರಿಗೆ ತೊಂದರೆಯಾಗದಂತೆ ಬಂದರು ಗಳನ್ನು ಮತ್ತು ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular