ಬೆಂಗಳೂರು: ಗಣರಾಜ್ಯೋತ್ಸವ ಮುನ್ನ ದಿನದಂದು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ರಾಜ್ಯದ 9 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಅಂಕೇಗೌಡ, ಅರ್ಮಿದಾ ಫೆರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ್ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ್ ಹನಗವಾಡಿ, ಟಿ.ಟಿ. ಜಗನ್ನಾಥ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಸಾಧಕರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ
2026ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಶತವಾಧಾನಿ ಆರ್. ಗಣೇಶ್ ಅವರಿಗೆ ಹಾಗೂ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅಂಕೇಗೌಡ, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪತಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಮತ್ತು ಟಿ.ಟಿ.ಜಗನ್ನಾಥ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಕಲೆ, ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಎಲ್ಲಾ ಮಹನೀಯರು ಸಲ್ಲಿಸಿರುವ ಸೇವೆ – ಇವರ ಸಾಧನೆ ಮುಂದಿನ ತಲೆಮಾರುಗಳಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದ್ದಾರೆ.

