HomeLatest Newsಖಾಲಿ ನಿವೇಶನಗಳ ಸ್ವಚ್ಚಗೊಳಿಸಿ, ತಪ್ಪಿದಲ್ಲಿ ಮಾಲೀಕರಿಗೆ ದಂಡದ ಎಚ್ಚರಿಕೆ

ಖಾಲಿ ನಿವೇಶನಗಳ ಸ್ವಚ್ಚಗೊಳಿಸಿ, ತಪ್ಪಿದಲ್ಲಿ ಮಾಲೀಕರಿಗೆ ದಂಡದ ಎಚ್ಚರಿಕೆ

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳ ಮಾಲೀಕರು ನಗರದಲ್ಲಿರುವ ಖಾಲಿ ನಿವೇಶನಗಳ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಅನುಪಯುಕ್ತ ಗಿಡ ಗಂಟಿಗಳು ಬೆಳೆದು ನೆರೆ ಹೊರೆಯವರಿಗೆ ಉಪದ್ರವಕಾರಿಯಾಗಿರುವುದಲ್ಲದೇ ಸೊಳ್ಳೆಗಳ ಅಭಿವೃದ್ಧಿ ತಾಣಗಳಾಗಿ ಪರಿವರ್ತನೆಗೊಂಡು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.

ನಗರದ ಸ್ವಚ್ಛತೆ ಹಾಗು ಸೌಂಧರ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ. ಖಾಲಿ ನಿವೇಶನಗಳ ಮಾಲೀಕರು ಈ ಕೂಡಲೇ ಸ್ವಚ್ಛಗೊಳಿಸಿ, 30 ದಿನಗಳೊಳಗೆ ಕನಿಷ್ಠ 6 ರಿಂದ 7 ಅಡಿ ಎತ್ತರದ ಕಾಂಕ್ರೀಟ್ ಪ್ರೇಕಾಸ್ಟ್ ಕೌಂಪೌಡ್, ಬ್ರಿಕ್ ಅಥವಾ ಫೆನ್ಸಿಂಗ್ ನಿರ್ಮಿಸಿಕೊಳ್ಳಬೇಕು.

ಇಲ್ಲದಿದ್ದÀಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಮಹಾನಗರಪಾಲಿಕಯಿಂದಲೇ ಸ್ವಚ್ಚಗೊಳಿಸಲು ಹಾಗೂ ಸ್ವಚ್ಛತೆಗೆ ತಗಲುವ ವೆಚ್ಚವನ್ನು ತಮ್ಮ ನಿವೇಶನಗಳ ಮೇಲೆ ಬೋಜಾ ಕೂರಿಸಲು ಕ್ರಮವಹಿಸಲಾಗುವುದೆಂದು ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular