HomeLatest Newsಅಜ್ಞಾತ ಸ್ಥಳ ಸೇರಿದ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ಶೋಧ: ನಾಳೆ ಜಾಮೀನು ಸಿಗದಿದ್ದರೆ...

ಅಜ್ಞಾತ ಸ್ಥಳ ಸೇರಿದ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ಶೋಧ: ನಾಳೆ ಜಾಮೀನು ಸಿಗದಿದ್ದರೆ ಶರಣಾಗತಿ ಸಾಧ್ಯತೆ

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೊತೆಗಿದ್ದವರಿಗೂ ತಿಳಿಸದೇ ಶಾಸಕ ಬೈರತಿ ಬಸವರಾಜ್ ಪರಾರಿಯಾಗಿದ್ದಾರೆ.

ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬೈರತಿ ಬಸವರಾಜ್ ಅವರ ಬಂಧನಕ್ಕೆ ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ. ಅವರಿಗೆ ಒಂದು ಬಾರಿ ಜೈಲು ಸೇರಿದರೆ ಜಾಮೀನು ಸಿಗುವುದು ಕಷ್ಟ. ವಿನಯ್ ಕುಲಕರ್ಣಿ, ಪ್ರಜ್ವಲ್ ವಿಚಾರದಲ್ಲಿಯೂ ಇದೆ ಆಗಿತ್ತು. ನಾಳೆ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಜಾಮೀನು ಸಿಗದಿದ್ದರೆ ಬೈರತಿ ಬಸವರಾಜ್ ಸರೆಂಡರ್ ಆಗಲೇಬೇಕಿದೆ. ನಾಳೆ ಕೋರ್ಟ್ ತೀರ್ಪಿನ ಮೇಲೆ ಬೈರತಿ ಬಸವರಾಜ್ ಭವಿಷ್ಯ ನಿಂತಿದೆ.

ಇನ್ನು ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಗೋವಾ, ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿಯ ಎರಡು ತಂಡ ಬೀಡು ಬಿಟ್ಟಿವೆ. ಬಸವರಾಜ್ ಪತ್ತೆಗಾಗಿ ಅಧಿಕಾರಿಗಳು ಮೂರು ತಂಡ ರಚಿಸಿದ್ದಾರೆ. ಎರಡು ತಂಡಗಳಿಂದ ಬೈರತಿ ಬಸವರಾಜ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ಗೋವಾ, ಪುಣೆಯಲ್ಲಿ ಎರಡು ತಂಡಗಳು ಶೋಧ ಕಾರ್ಯ ಕೈಗೊಂಡಿವೆ. ಮೂರನೇ ತಂಡದಿಂದ ತಾಂತ್ರಿಕ ವಿಚಾರದ ಮೇಲೆ ನಿಗಾ ವಹಿಸಿ ಪರಿಶೀಲನೆ ನಡೆಸಲಾಗಿದೆ. ಶಾಸಕ ಮತ್ತು ಆಪ್ತರ ಮೇಲೆ ನಿಗಾ ವಹಿಸಲಾಗಿದೆ. ಆಪ್ತರನ್ನು ಸಂಪರ್ಕಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗಿದೆ. ಸದ್ಯ ಬಂಧನ ಭೀತಿಯಿಂದ ಸಿಐಡಿಯ ಕಣ್ಣು ತಪ್ಪಿಸಿ ಬೈರತಿ ಬಸವರಾಜ್ ಅವರು ಅಜ್ಞಾತ ಸ್ಥಳ ಸೇರಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular