HomeLatest NewsBREAKING: ಚಿಟ್ ಫಂಡ್ ಹೆಸರಲ್ಲಿ ಕೋಟಿ ಕೋಟಿ ವಂಚನೆ: 'ನವಶಕ್ತಿ ಚಿಟ್ ಫಂಡ್' ಅಧ್ಯಕ್ಷ ಶರವಣ...

BREAKING: ಚಿಟ್ ಫಂಡ್ ಹೆಸರಲ್ಲಿ ಕೋಟಿ ಕೋಟಿ ವಂಚನೆ: ‘ನವಶಕ್ತಿ ಚಿಟ್ ಫಂಡ್’ ಅಧ್ಯಕ್ಷ ಶರವಣ ಅರೆಸ್ಟ್

ಬೆಂಗಳೂರು: ಚಿಟ್ ಫಂಡ್ ಹೆಸರಲ್ಲಿ ಕೋಟಿ ಕೋಟಿ ಹಣ ವಂಚಿಸಿದ್ದ ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣನನ್ನು ಕೊನೆಗೂ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಚಿಟ್ ಫಂಡ್ ಹೆಸರಲ್ಲಿ ನೂರಾರು ಜನರಿಂದ ಲಕ್ಷ ಲಕ್ಷ ಹಣ ಸಂಗ್ರಹಿಸಿದ್ದ ಶರವಣ, ಹಣ ನೀಡದೇ ಪರಾರಿಯಾಗಿದ್ದ. ಬೆಂಗಳೂರಿನ ವಿವಿಧ ಬಡಾವಣೆಗಳ ಜನರು ಈತನಿಂದ ವಂಚನೆಗೊಳಗಾಗಿದ್ದರು. ರಾಜಾಜಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಶರವಣ ವಿರುದ್ಧ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಶರವಣ ತಲೆಮರೆಸಿಕೊಂಡಿದ್ದ. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಐಡಿ ಅಧಿಕಾರಿಗಳು ನವಶಕ್ತಿ ಚಿಟ್ ಫಂಡ್ ಅಧ್ಯಕ್ಷ ಶರವಣನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular