HomeKarnatakaSHOCKING NEWS: ಮಗು ಹಠ ಮಾಡುತ್ತೆ ಎಂದು ಡೈಪರ್ ಒಳಗೆ ಖಾರದಪುಡಿ ಹಾಕಿ; ಕೈಗೆ ಬರೆಕೊಟ್ಟು...

SHOCKING NEWS: ಮಗು ಹಠ ಮಾಡುತ್ತೆ ಎಂದು ಡೈಪರ್ ಒಳಗೆ ಖಾರದಪುಡಿ ಹಾಕಿ; ಕೈಗೆ ಬರೆಕೊಟ್ಟು ವಿಕೃತಿ ಮೆರೆದ ಅಂಗನವಾಡಿ ಸಹಾಯಕಿ

ರಾಮನಗರ: ಮಗು ಹಠ ಮಾಡುತ್ತೆ ಎಂದು ಮಗುವಿನ ಡೈಪರ್ ಒಳಗೆ ಖಾರದ ಪುಡಿ ಹಾಕಿ, ಕೈಗೆ ಬರೆಕೊಟ್ಟು ಅಂಗನವಾಡಿ ಸಹಾಯಕಿಯೊಬ್ಬಳು ಮನುಷತ್ವವನ್ನೂ ಮರೆತು ವಿಕ್ರ‍ಿತಿ ಮೆರೆದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟಿಯಲ್ಲಿ ನಡೆದಿದೆ.

ರಮೇಶ್ ಹಾಗೂ ಚೈತ್ರಾ ದಂಪತಿಯ 2 ವರ್ಷದ ಮಗು ದೀಕ್ಷಿತ್ ಮೇಲೆ ಅಂಗನವಾಡಿ ಸಹಾಯಕಿ ಕ್ರೌರ್ಯ ಮೆರೆದಿದ್ದಾಳೆ. ಚಂದ್ರಮ್ಮ ಎಂಬ ಅಂಗನವಾಡಿ ಸಹಾಯಕಿ ಮಗುವಿನ ಡೈಪರ್ ಗೆ ಖಾರದ ಪುಡಿ ಹಾಕಿ, ಕೈಗಳಿಗೆ ಬರೆ ಕೊಟ್ಟಿದ್ದಾಳೆ.

ಮಧ್ಯಾಹ್ನ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಅಂಗನವಾಡಿ ಬಳಿ ಬಂದಾಗ ವಿಷಯ ಗೊತ್ತಾಗಿದೆ. ತಕ್ಷಣ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಕ್ಕಳ ಕಲ್ಯಾಣಾಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಅಂಗನವಾಡಿ ಸಹಾಯಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular