HomeLive Newsಬಾವಿ ಸ್ವಚ್ಛಗೊಳಿಸುವಾಗ ದುರಂತ: ಉಸಿರುಗಟ್ಟಿ ಓರ್ವ ಸಾವು

ಬಾವಿ ಸ್ವಚ್ಛಗೊಳಿಸುವಾಗ ದುರಂತ: ಉಸಿರುಗಟ್ಟಿ ಓರ್ವ ಸಾವು

ಚಿಕ್ಕಮಗಳೂರು: ಬಾವಿ ಸ್ವಚ್ಛ ಮಾಡುವಾಗ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಇಲ್ಲಿನ ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಮೃತನನ್ನು ಮೋಹನ್ (40) ಎಂದು ಗುರುತಿಸಲಾಗಿದೆ. ದರ್ಶನ್ ಎಂಬವವರ ಮನೆಯ ಬಾವಿ ಸ್ವಚ್ಛ ಮಾಡಲು ಮೋಹನ್ ಹೋಗಿದ್ದರು. ಬಾವಿಯ ಒಳಗೆ ಇಳಿದಾಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾವಿಯಿಂದ ಮೇಲೆ ಬರಲಾಗದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular