ಚಿಕ್ಕಮಗಳೂರು: ಚಿಕ್ಕಮಗಳೂರಿನ ಹೋಂ ಸ್ಟೇಯೊಂದರಲ್ಲಿ ಯುವತಿ ಅನುಮಾಅನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕನ ವಿರುದ್ಧ ನಾಲ್ಕು ತಿಂಗಳ ಬಳಿಕ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ ಎಂಬ ಯುವತಿ 2025ರ ಅಕ್ಟೋಬರ್ 25ರಂದು ಸ್ನೇಹಿತಯ ನಿಶ್ಚಿತಾರ್ಥಕ್ಕೆಂದು ಹೋಗಿದ್ದಳು. ಈ ವೇಳೆ ಹೋಂ ಸ್ಟೇಯಲ್ಲಿ ಉಳಿದಿದ್ದಳು. ಅಂದು ರಂಜಿತಾ ಹೋಂ ಸ್ಟೇ ಬಾತ್ ರೂಂ ನಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಬದುಕಿರಲಿಲ್ಲ.
ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಸಾವಿಗೆ ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿ ಸಾವನ್ನಪ್ಪಿದದಗಿ ದೃಢಪಟ್ಟಿದೆ. ರೂಂ ನಲ್ಲಿ ಸರಿಯಾದ ವೆಂಟೀಲೇಷನ್ ವ್ಯವಸ್ಥೆ ಇಲ್ಲದೇ ದುರಂತ ಸಂಭವಿಸಿದೆ ಎಂದು ಹೋಂ ಸ್ಟೇ ಮಾಲಿಕ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೋಂ ಸ್ಟೇ ಮಾಲೀಕನ ನಿರ್ಲಕ್ಷವೇ ಯುವತಿ ಸಾವಿಗೆ ಕಾರಣ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

