HomeLatest Newsಪ್ರೀತಿಸಿದವಳಿಗೆ ಮೋಸ ಮಾಡಿ ಬೇರೊಂದು ಯುವತಿಯೊಂದಿಗೆ ವಿವಾಹವಾದ ಯುವಕ: ಮದುವೆ ಮಂಟಪಕ್ಕೆ ನುಗ್ಗಿ ಪ್ರತಿಭಟಿಸಿದ ಸಂತ್ರಸ್ತೆಯ...

ಪ್ರೀತಿಸಿದವಳಿಗೆ ಮೋಸ ಮಾಡಿ ಬೇರೊಂದು ಯುವತಿಯೊಂದಿಗೆ ವಿವಾಹವಾದ ಯುವಕ: ಮದುವೆ ಮಂಟಪಕ್ಕೆ ನುಗ್ಗಿ ಪ್ರತಿಭಟಿಸಿದ ಸಂತ್ರಸ್ತೆಯ ಮೇಲೆ ಹಲ್ಲೆ

ಚಿಕ್ಕಮಗಳೂರು: ಪ್ರೀತಿಸಿದವಳಿಗೆ ಮೋಸ ಮಾಡಿ ಕೈಕೊಟ್ಟ ಯುವಕ ಬೇರೊಂದು ಯುವತಿಯೊಂದಿಗೆ ವಿವಾಹವಾಗುತ್ತಿರುವ ವಿಷಯ ಕೇಳಿ, ಪ್ರೇಯಸಿ ಮದುವೆ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಮೂಲದ ಯುವಕ ಶರತ್ ಎಂಬಾತ ಹತ್ತು ವರ್ಷಗಳಿಂದ ಹಾಸನ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಅಲ್ಲದೇ ಯುವತಿಯ ಮನೆಯವರನ್ನೂ ಮದುವೆಗೆ ಒಪ್ಪಿಸಿದ್ದ. ಈ ಮಧ್ಯೆ ತಾನು ದುಬೈಗೆ ಹೋಗುವುದಾಗಿ ಹೇಳಿ ಎಸ್ಕೇಪ್ ಆಗಿದ್ದ ಯುವಕ ಮತ್ತೊಂದು ವಿವಾಹವಾಗಿ ಆಕೆಗೂ ಮೋಸ ಮಾಡಿ ವಿಚ್ಛೇದನ ನೀಡಿದ್ದ. ಈ ಘಟನೆ ಬಳಿಕ ಮತ್ತೆ ಹಳೇ ಪ್ರೇಯಸಿ ಬಳಿ ಬಂದು ಮತ್ತೆ ಮದುವೆ ಪ್ರಸ್ತಾಪ ಮಾಡಿ ಮಾತುಕತೆಯನ್ನೂ ಮುಗಿಸಿದ್ದ. ಕಳೆದ ನವರಾತ್ರಿ ವೇಳೆ ಯುವತಿಯ ಕುಟುಂಬ ಹಾಗೂ ಶರತ್ ಕುಟುಂಬಗಳ ಜೊತೆ ಮದುವೆ ಮಾತುಕತೆ ನಡೆದಿತ್ತು ಎನ್ನಲಾಗಿದೆ.

ಶರತ್ ತನ್ನನ್ನು ಮದುವೆಯಾಗಿದ್ದ ಯುವತಿಗೆ ಈಗ ಶಾಕ್ ಆಗಿದೆ. ಶರತ್ ಯುವತಿಗೆ ಕೈಕೊಟ್ಟು ಬೇರೊಂದು ಯುವತಿಯ ಜೊತೆ ಮದುವೆಗೆ ಸಜ್ಜಾಗಿ ಅರಿಷಿಣ ಶಾಸ್ತ್ರ ನಡೆಯುವಾಗ ಪ್ರೇಯಸಿಗೆ ವಿಷಯ ಗೊತ್ತಾಗಿದೆ. ಹಾಸನದಿಂದ ಚಿಕ್ಕಮಗಳೂರಿಗೆ ಧಾವಿಸಿದ ಯುವತಿ ಶರತ್ ಮನೆಗೆ ಬಂದು ತನಗೆ ಯಾಕೆ ಮೋಸ ಮಾಡುತ್ತಿರುವುದು ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಶರತ್ ವಿರುದ್ಧ ದೂರು ದಾಖಲಿಸಿದ್ದಾಳೆ. ಠಾಣೆಗೆ ಕರೆಸಿ ಪೊಲೀಸರು ಶರತ್ ಗೆ ಬುದ್ಧಿ ಹೇಳಿದ್ದಾರೆ. ಮದುವೆ ನಿಲ್ಲಿಸುವಂತೆ ಹಾಗೂ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ ಯುತಿಯನ್ನು ಮದುವೆಯಾಗುವಂತೆ ಹೇಳಿದ್ದಾರೆ. ಠಾಣೆಯಲ್ಲಿ ಪೊಲೀಸರ ಮುಂದೆ ಒಪ್ಪಿಕೊಂಡ ಶರತ್ ಇಂದು ಚಿಕ್ಕಮಗಳೂರು ನಗರದ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಯುವತಿಯ ಜೊತೆ ಮದುವೆಗೆ ಸಿದ್ಧನಾಗಿದ್ದಾನೆ. ವಿಷಯ ತಿಳಿದು ಕಲ್ಯಾಣ ಮಂಟಪಕ್ಕೆ ಬಂದ ಸಂತ್ರಸ್ತ ಪ್ರೇಯಸಿ ಮದುವೆ ನಿಲ್ಲಿಸಲು ಯತ್ನಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಶರತ್ ಬೇರೊಂದು ಯುವತಿಗೆ ತಾಳಿ ಕಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದುವೆ ಮಂಟಪದ ಬಳಿ ತನಗೆ ನ್ಯಾಯ ಕೊಡಿಸುವಂತೆ ಧರಣಿ ಕುಳಿತು, ಪ್ರತಿಭಟಿಸಿದ ಸಂತ್ರಸ್ತೆ ಮೇಲೆ ಯುವಕನ ತಾಯಿ ಹಾಗೂ ಕುಟುಂಬ ಹಲ್ಲೆ ನಡೆಸಿದ್ದು, ಹಣ ಕೊಡುತ್ತೇವೆ ಸ್ಥಳದಿಂದ ತೆರಳುವಂತೆ ಪೊಲೀಸರ ಮುಂದೆಯೇ ಆವಾಜ್ ಹಾಕಿದ್ದಾರೆ. ಕಣ್ಮುಂದೆಯೇ ಅನ್ಯಾಯದ ಮೇಲೆ ಅನ್ಯಾಯ ನಡೆಸುತ್ತಿರುವ ಯುವಕ ಹಾಗೂ ಆತನ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ಯುವತಿ ಕಾನೂನು ಹೋರಾಟ ನಡೆಸುವುದಾಗಿ, ಮಹಿಳಾ ಆಯೋಗಕ್ಕೂ ದೂರು ನೀಡುವುದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular