HomeLatest NewsBREAKING: ಕಾಮೇನಹಳ್ಳಿ ಫಾಲ್ಸ್ ನಲ್ಲಿ ದುರಂತ: ಬಂಡೆ ಮೇಲಿಂದ ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

BREAKING: ಕಾಮೇನಹಳ್ಳಿ ಫಾಲ್ಸ್ ನಲ್ಲಿ ದುರಂತ: ಬಂಡೆ ಮೇಲಿಂದ ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!

ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಕಾಮೇನಹಳ್ಳಿ ಫಾಲ್ಸ್ ನೋಡಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಕಾಮೇನಹಳ್ಳಿ ಫಾಲ್ಸ್ ನೋಡಲೆಂದು ಬೆಳಗಾವಿಯಿಂದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ಜಲಪಾತದ ಬಂಡೆಯ ಮೇಲೆ ನಿಂತಿದ್ದ ವಿದ್ಯಾರ್ಥಿ, ಕಾಲು ಜಾರಿ ಜಲಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.

ವರುಣ್ (17) ನೀರುಪಾಲಾಗಿ ಸಾವನ್ನಪ್ಪಿರುವ ವಿದ್ಯಾರ್ಥಿ. ಘಟನ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular