HomeCrime4 ತಿಂಗಳ ನಂತ್ರ ಬಯಲಾಯ್ತು ವಿಧವೆ ಕೊಲೆ ರಹಸ್ಯ: ಮೊಬೈಲ್ ಕರೆ ಆಧಾರದಲ್ಲಿ ಸಿಕ್ಕಿಬಿದ್ದ ಪ್ರಿಯತಮೆಯನ್ನೇ...

4 ತಿಂಗಳ ನಂತ್ರ ಬಯಲಾಯ್ತು ವಿಧವೆ ಕೊಲೆ ರಹಸ್ಯ: ಮೊಬೈಲ್ ಕರೆ ಆಧಾರದಲ್ಲಿ ಸಿಕ್ಕಿಬಿದ್ದ ಪ್ರಿಯತಮೆಯನ್ನೇ ಕೊಂದು ಹೂತಿಟ್ಟಿದ್ದ ಪ್ರಿಯಕರ

ಚಿಕ್ಕಮಗಳೂರು: ನಾಲ್ಕು ತಿಂಗಳ ನಂತರ ವಿಧವೆ ಕೊಲೆ ಪ್ರಕರಣ ಭೇದಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರಿಯತಮೆ ಕೊಂದು ಹೂತು ಹಾಕಿದ ಆರೋಪಿ ಪ್ರಕಾಶ್(28) ಎಂಬುವನನ್ನು ಬಂಧಿಸಲಾಗಿದೆ. ತ್ಯಾವಣ ಗ್ರಾಮದ 42 ವರ್ಷದ ಮಹಿಳೆ ತಲೆಗೆ ಹೊಡೆದು ಕೊಲೆ ಮಾಡಿದ್ದ ಪ್ರಕಾಶ್ ನಿರ್ಜನ ಪ್ರದೇಶದಲ್ಲಿ ಶವ ಹೂತಿಟ್ಟಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೃಂಗೇರಿ ತಾಲೂಕಿನ ತ್ಯಾವಣ ಗ್ರಾಮದಲ್ಲಿ ಘಟನೆ ನಡೆದಿತ್ತು. ಗ್ರಾಮದಲ್ಲಿ ಮಹಿಳೆ ಮತ್ತು ಪ್ರಕಾಶ್ ಕೂಲಿ ಕೆಲಸ ಮಾಡಿಕೊಂಡಿದ್ದರು. ವಿಧವೆ ಜೊತೆ ವಿವಾಹಿತ ಪ್ರಕಾಶ್ ಆಕ್ರಮ ಸಂಬಂಧ ಹೊಂದಿದ್ದ. ತನ್ನನ್ನು ಮದುವೆಯಾಗುವಂತೆ ಆಕೆ ಪ್ರಕಾಶನಿಗೆ ಒತ್ತಾಯಿಸುತ್ತಿದ್ದಳು. ಇಬ್ಬರ ನಡುವೆ ಜಗಳವಾಗಿ ಮಹಿಳೆ ತಲೆಗೆ ಹೊಡೆದು ಪ್ರಕಾಶ್ ಕೊಲೆ ಮಾಡಿದ್ದ. ನಿರ್ಜನ ಪ್ರದೇಶದಲ್ಲಿ ಮೃತದೇಹ ಹೂತಿಟ್ಟು ಊರಿಗೆ ತೆರಳಿದ್ದ.

ಪೊಲೀಸರ ವಿಚಾರಣೆ ವೇಳೆ ತನಗೇನೂ ಗೊತ್ತಿಲ್ಲವೆಂದು ಹೇಳುತ್ತಿದ್ದ. ಮೊಬೈಲ್ ಕರೆ ಆಧಾರದಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಹತ್ಯೆಯಾದ ವಿಧವೆ ಪ್ರಿಯಕರ ಪ್ರಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular